ಹೈದರಾಬಾದ್: ತೆಲುಗು ಚಿತ್ರ ನಿರ್ಮಾಪಕ ಹಾಗೂ ಟಾಲಿವುಡ್‌ನ ಪ್ರಮುಖ ಸಾರ್ವಜನಿಕ ಸಂಪರ್ಕ ತಜ್ಞರಾಗಿದ್ದ ಮಹೇಶ್ ಕೊನೇರು (40) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಂದಮೂರಿ ಕುಟುಂಬದ ಆಪ್ತರಾಗಿದ್ದ ಕೊನೇರು, ‘118’, ‘ತಿಮ್ಮರಸು’ ಹಾಗೂ ‘ಮಿಸ್ ಇಂಡಿಯಾ’ ಎಂಬ ಸಿನಿಮಾಗಳನ್ನು ನಿರ್ಮಿಸಿದ್ದರು. ಅಲ್ಲದೇ ಅಲ್ಲು ಸಿರೀಶ್ ಅವರ ಚಿತ್ರವೊಂದನ್ನು ನಿರ್ಮಿಸುತ್ತಿದ್ದರು.

ಆರಂಭದಲ್ಲಿ ಸಿನಿಮಾ ಪತ್ರಕರ್ತರಾಗಿದ್ದ ಅವರು, ತೆಲುಗು ಚಿತ್ರರಂಗದ ಬಹು ಬೇಡಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (ಪಿಆರ್‌ಓ) ಕೆಲಸ ಮಾಡಿದ್ದರು. ಬ್ಲಾಕ್‌ಬಸ್ಟರ್ ‘ಬಾಹುಬಲಿ’ ಸಿನಿಮಾಕ್ಕೂ ಪಿಆರ್‌ಓ ಆಗಿದ್ದರು.

ಅವರ ನಿಧನಕ್ಕೆ ಜೂನಿಯರ್ ಎನ್‌ಟಿಆರ್, ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತೆಲುಗು ಚಿತ್ರ ನಿರ್ಮಾಪಕ ಹಾಗೂ ಟಾಲಿವುಡ್‌ನ ಪ್ರಮುಖ ಸಾರ್ವಜನಿಕ ಸಂಪರ್ಕ ತಜ್ಞರಾಗಿದ್ದ ಮಹೇಶ್ ಕೋನೇರು (40) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.