×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಬಿಟ್ಟು ಹೂ ವ್ಯಾಪಾರ ಆರಂಭಿಸಿದ್ದೀರಾ? ಲಾರಾ ದತ್ತಾಗೆ ನೆಟ್ಟಿಗನ ಪ್ರಶ್ನೆ

Published : 13 ಅಕ್ಟೋಬರ್ 2021, 7:22 IST
ಫಾಲೋ ಮಾಡಿ
Comments

ಬೆಂಗಳೂರು: ಸಾಮಾಜಿಕ ಜಾಲತಾಣ 'ಕೂ' ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಶೇರ್‌ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಕುಟುಂಬದ ಜೊತೆ ಪ್ರವಾಸ ಕೈಕೊಂಡಿರುವ ನಟಿ ಲಾರಾ ದತ್ತಾ, 'ಸುಂದರ ತಾಣಗಳಲ್ಲಿ ಕುಟುಂಬದವರ ಜೊತೆ ನಾವು ಕೆಲ ಸಮಯ ಕಳೆಯಬೇಕು’ ಎಂದು ಬರೆದುಕೊಂಡು ಫೋಟೊವನ್ನು ಹಂಚಿಕೊಂಡಿದ್ದರು.

ಲಾರಾ ದತ್ತಾ ಅವರ ಈ ಪೋಸ್ಟ್‌ಗೆ ಸಾಕಷ್ಟು ಜನ ಕಮೆಂಟ್ ಗಳನ್ನು ಮಾಡಿದ್ದಾರೆ. ಹೂವುಗಳೊಂದಿಗೆ ನಿಮ್ಮನ್ನು ನೋಡಲು ಖುಷಿಯಾಗುತ್ತದೆ. ನೀವೇನಾದರೂ ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿಕೊಂಡಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.

ಈಗಾಗಲೇ ನಿಮ್ಮ ಬಳಿ ಸ್ವತಂತ್ರ ಇದೆ. ಇನ್ನು ಬಿಸಿಲಿನ ಆನಂದವನ್ನು ಪಡೆಯಲು ಉತ್ತಮ ಜಾಗ ಎಂದರೆ ಅದು ನಿಮ್ಮ ಮನೆಯ ಮಹಡಿ ಎಂದು' ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಲಾರಾ ದತ್ತ ಅವರು 'ಬೆಲ್ ಬಾಟಂ' ಸಿನಿಮಾಕ್ಕಾಗಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಇಂದಿರಾ ಗಾಂಧಿ ಮೇಕಪ್ ವಿಡಿಯೊ ವೈರಲ್ ಆಗಿತ್ತು.

ಈ ಪಾತ್ರಕ್ಕೆ ಕುಟುಂಬದವರು ಸೇರಿದಂತೆ, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಸಾಮಾಜಿಕ ಜಾಲತಾಣ 'ಕೂ' ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಶೇರ್‌ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT