ಕೋವಿಡ್ ಆತಂಕ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಏಟು ಕೊಟ್ಟಿದೆ. ಈ ಸಂದರ್ಭದಲ್ಲಿ ಬಹು ನಿರೀಕ್ಷಿತ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಏನಾದೀತು ಎಂಬ ಕುತೂಹಲ, ನಿರೀಕ್ಷೆ ಸಿನಿ ಆಸಕ್ತರಲ್ಲಿ ಉಳಿದಿದೆ.

2020, 2021ರಲ್ಲಿ ಕೋವಿಡ್ ಕಾರಣದಿಂದಲೇ ಮುಂದಕ್ಕೆ ಹೋಗಿದ್ದ ಚಿತ್ರೋತ್ಸವ ಈ ಬಾರಿಯೂ ಒಂದೆರಡು ಬಾರಿ ದಿನಾಂಕ ಮುಂದಕ್ಕೆ ಹಾಕುತ್ತಲೇ ಬಂದಿತು. ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ, ಬೆಳಗಾವಿ ಅಧಿವೇಶನ ಸಹ ವಿಳಂಬದ ಕಾರಣಗಳಲ್ಲಿ ಸೇರಿಕೊಂಡವು.

‘ಹೌದು, ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಆದರೆ, ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ನಾವು ಸ್ವಲ್ಪ ಕಾದು ನೋಡುವಂತೆ ಮಾಡಿವೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್.

‘ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರೋತ್ಸವ ಏರ್ಪಡಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

‘ನಮಗೆ ಈ ಚಿತ್ರೋತ್ಸವವನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕು ಎಂಬ ಉದ್ದೇಶವಿದೆ. ನೇರ ಪ್ರದರ್ಶನಗಳು ನಡೆದರೆ ಅದರ ಪರಿಣಾಮ, ಉತ್ಸವದ ವೈಭವವೇ ಬೇರೆ. ಸಿನಿ ಆಸಕ್ತರಿಗೆ ಸಮಗ್ರ ಮಾಹಿತಿ, ಚಿತ್ರರಂಗದ ಪ್ರಮುಖರೊಂದಿಗೆ ಮುಖಾಮುಖಿಗೆ ಅವಕಾಶ ಸಿಗುತ್ತದೆ. ಈ ದೃಷ್ಟಿಯಿಂದ ಚಿತ್ರೋತ್ಸವವನ್ನು ನೇರವಾಗಿಯೇ ನಡೆಸಬೇಕು ಎಂಬ ಆಶಯ ಇದೆ. ಅದೇ ರೀತಿ ಆಗುವ ಭರವಸೆಯೂ ಇದೆ’ ಎನ್ನುತ್ತಾರೆ.

ಹೈಬ್ರಿಡ್ ಅಥವಾ ನೇರವಾಗಿಯೇ ಉತ್ಸವ ಏರ್ಪಡಿಸುವ ಸಂಬಂಧ ಚಿತ್ರೋದ್ಯಮದವರೂ ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಪ್ರದರ್ಶನ ಸಂಬಂಧಿಸಿ ಶೇ 50ರ ಆಸನ ಭರ್ತಿ ಈಗಾಗಲೇ ಇದೆ. ಉತ್ಸವಕ್ಕೂ ಇದೇ ಇತಿಮಿತಿ ಅನ್ವಯಿಸುವ ಸಾಧ್ಯತೆ ಇದೆ. ಹಾಗಿರುವಾಗ ಚಿತ್ರೋತ್ಸವ ಕಳೆಗಟ್ಟೀತೇ ಎಂಬ ಆತಂಕ ಪ್ರದರ್ಶಕರ ವಲಯದಿಂದ ಕೇಳಿಬಂದಿದೆ.

‘ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ವಿಶ್ವದ ಪ್ರಮುಖ ಚಿತ್ರೋತ್ಸವಗಳೆಲ್ಲ ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಪ್ರೇಕ್ಷಕರ ಪಾಲ್ಗೊಳ್ಳುವಿಕೆ, ಚಿತ್ರಗಳ ತಲುಪುವಿಕೆ ವರ್ಚುವಲ್ ಮಾದರಿಯಲ್ಲೇ ಹೆಚ್ಚು ಇರುತ್ತದೆ. ಆದರೆ, ನೇರ ಪ್ರದರ್ಶನದ ಅನುಭವ ಸಿಗಲು ಸಾಧ್ಯವಿಲ್ಲ’ ಎನ್ನುತ್ತಾರೆ ಪುರಾಣಿಕ್.

-ಸುನಿಲ್ ಪುರಾಣಿಕ್

ಜ. 7ರಂದು ಚಿತ್ರೋತ್ಸವದ ದಿನಾಂಕ ನಿಗದಿ ಸಂಬಂಧಿಸಿ ಮುಖ್ಯಮಂತ್ರಿಯವರ ಜತೆ ಮಾತುಕತೆ ನಿಗದಿಯಾಗಿತ್ತು. ಅದು ಮುಂದಕ್ಕೆ ಹೋಗಿದೆ. ಶುಕ್ರವಾರ (ಜ. 21) ನಡೆಯಲಿರುವ ಕೋವಿಡ್ ನಿಯಮಗಳಿಗೆ ಸಂಬಂಧಿಸಿ ಮುಖ್ಯಮಂತ್ರಿ ನೇತೃತ್ವದ ಸಭೆಯ ನಿರ್ಧಾರಗಳನ್ನು ನೋಡಿಕೊಂಡು ಮತ್ತೊಮ್ಮೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳುತ್ತಾರೆ.

ಚಿತ್ರೋತ್ಸವಕ್ಕೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಾಕಷ್ಟು ಚಿತ್ರಗಳ ಪ್ರದರ್ಶನಕ್ಕಾಗಿ ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ಪರಿಶೀಲನೆ ನಡೆಯುತ್ತಿದೆ. ಶೀಘ್ರವೇ ಪಟ್ಟಿಯನ್ನೂ ಬಿಡುಗಡೆ ಮಾಡುತ್ತೇವೆ ಎಂದು ಅವರು ವಿವರಿಸುತ್ತಾರೆ.

ಕೋವಿಡ್ ಆತಂಕ ಕಡಿಮೆಯಾಗಿ ಚಿತ್ರೋತ್ಸವದ ಹಾದಿ ಸುಗಮವಾಗಲಿ ಎಂಬುದು ಸಿನಿಮಾಸಕ್ತರ ಆಶಯವೂ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.