×
ADVERTISEMENT
ಈ ಕ್ಷಣ :
ADVERTISEMENT

ನೋಡಿ–ಅಣ್ಣಾತ್ತೆ ಟೀಸರ್ ಬಿಡುಗಡೆ: ಮೋಡಿ ಮಾಡಿದ ರಜನಿಕಾಂತ್

Published : 16 ಅಕ್ಟೋಬರ್ 2021, 10:36 IST
ಫಾಲೋ ಮಾಡಿ
Comments

ಬೆಂಗಳೂರು: ದಸರಾ ಪ್ರಯುಕ್ತ ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ‘ ಸಿನಿಮಾದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಟೋಸರ್ ಅಣ್ಣಾತ್ತೆ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದ್ದು, ರಜನಿಕಾಂತ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 6 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ರಜನಿಕಾಂತ್‌ ಬಿಳಿ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ. ರಜನಿಯ ವಿಭಿನ್ನ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌

2020 ರಲ್ಲಿ ಎ.ಆರ್.ಮುರುಘದಾಸ್ ನಿರ್ದೇಶನದ ‘ದರ್ಬಾರ್‘ ಬಿಡುಗಡೆಯಾದ ನಂತರ ರಜನಿಕಾಂತ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಕೊರೊನಾ ಲಾಕ್‌ಡೌನ್ ಪರಿಣಾಮದಿಂದ 'ಅಣ್ಣಾತ್ತೆ' ಚಿತ್ರದ ಶೂಟಿಂಗ್ ಮೂರು ಬಾರಿ ಮುಂದಕ್ಕೆ ಹೋಗಿತ್ತು. ಅಲ್ಲದೇ ಒಂದು ಬಾರಿ ರಜನಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ನವೆಂಬರ್ 4 ರಂದು ದೀಪಾವಳಿ ಹಬ್ಬಕ್ಕೆ ‘ಅಣ್ಣಾತ್ತೆ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದು, ನಿರ್ದೇಶಕ ಶಿವಾ ಅವರು ನಿರ್ದೇಶಿಸುತ್ತಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾ ಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ದಸರಾ ಪ್ರಯುಕ್ತ ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ‘ ಸಿನಿಮಾದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT