×
ADVERTISEMENT
ಈ ಕ್ಷಣ :
ADVERTISEMENT

ದೀಪಾವಳಿಗೆ ಅಮೆಜಾನ್‌ ಪ್ರೈಮ್‌ನಲ್ಲಿ ನಟ ಸೂರ್ಯಾ ಅಭಿನಯದ ‘ಜೈ ಭೀಮ್‘

Published : 12 ಅಕ್ಟೋಬರ್ 2021, 9:55 IST
ಫಾಲೋ ಮಾಡಿ
Comments

ಚೆನ್ನೈ: ತಮಿಳು ನಟ ಸೂರ್ಯಾ ಅಭಿನಯದ ‘ಜೈ ಭೀಮ್’ ತಮಿಳು ಸಿನಿಮಾ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 2 ಕ್ಕೆ ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ನಟ ಸೂರ್ಯಾ ಹಾಗೂ ಅಮೆಜಾನ್ ಪ್ರೈಮ್‌ ಇಂಡಿಯಾ ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಮೋಷನ್ ಪೊಸ್ಟರ್ ಕೂಡ ಇಂದು ಬಿಡುಗಡೆಯಾಗಿದೆ.

ಸೂರ್ಯಾ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ ‘2ಡಿ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ಜೈ ಭೀಮ್‌’ನ್ನು ನಿರ್ದೇಶಕ ಜ್ಞಾನವೇಲ ನಿರ್ದೇಶಿಸಿದ್ದಾರೆ. ನ್ಯಾಯಾಂಗ ಹಾಗೂ ಬಡವರ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ರಾಜ್, ರಾಜಿಶಾ ವಿಜಯನ್, ಲಿಜ್‌ಮೋಲ್ ಜೋಶ್ ಇದ್ದಾರೆ. ಕನ್ನಡ, ತೆಲುಗು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.

ಕಳೆದ ವರ್ಷ ಸೂರ್ಯಾ ಅಭಿನಯದ ‘ಸೂರರೈ ಪೊಟ್ರು’ ಸಿನಿಮಾ ಕೂಡ ನೇರವಾಗಿ ಓಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಇದಕ್ಕೆ ಚಿತ್ರಮಂದಿರಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ‘ದೊಡ್ಡ ಸ್ಟಾರ್‌ಗಳ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದರೆ ನಮ್ಮ ಗತಿಯೇನು?’ ಎಂದು ಪ್ರಶ್ನಿಸಿದ್ದರು.

ಅದಾಗ್ಯೂ ಕೂಡ ಸೂರ್ಯಾ ತಲೆ ಕೆಡಿಸಿಕೊಳ್ಳದೇ ಅವರು ಮತ್ತೆ ತಮ್ಮ ಚಿತ್ರವನ್ನು ಓಟಿಟಿಗೆ ನೀಡಿದ್ದಾರೆ.

ತಮಿಳು ನಟ ಸೂರ್ಯಾ ಅಭಿನಯದ ಜೈ ಭೀಮ್ ತಮಿಳ್ ಸಿನಿಮಾ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 2 ಕ್ಕೆ ನೇರವಾಗಿ ಅಮೆಜಾನ್‌ ಫ್ರೈಂನಲ್ಲಿ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT