1. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಮಾಹಿತಿಯನ್ನು ಹೇಗೆ ಪಡೆಯಬೇಕು?

–ಶಿವರಾಜ್ ಬೆಲ್ಲೇರಿ, ಊರು ತಿಳಿಸಿಲ್ಲ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಪ್ರಕಟವಾಗುವ ಎಂಪ್ಲಾಯ್‌ಮೆಂಟ್ ನ್ಯೂಸ್ ವಾರಪತ್ರಿಕೆಗೆ ನೀವು ಚಂದಾದಾರರಾಗಬಹುದು. ಈ ವಾರಪತ್ರಿಕೆ ಮುದ್ರಣ ಮಾಧ್ಯಮ ಮತ್ತು ಇ-ಪೇಪರ್ ಆವೃತ್ತಿಯಲ್ಲಿಯೂ ದೊರಕುತ್ತದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಯಾ ಇಲಾಖೆಗಳ ವೆಬ್‌ಸೈಟ್ ಮತ್ತು ದಿನಪತ್ರಿಕೆಗಳಲ್ಲಿ ಅಧಿಸೂಚನೆಗಳ ಪ್ರಕಟಣೆಯೂ ಇರುತ್ತದೆ. ಸರ್ಕಾರಿ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳುವುದರಿಂದ ಉದ್ಯೋಗವನ್ನು ಅರಸಲು ಸಹಾಯವಾಗಬಹುದು ಹಾಗೂ ಉದ್ಯೋಗಗಳ ಮಾಹಿತಿ ಅನೇಕ ಖಾಸಗಿ ವೆಬ್‌ಸೈಟ್‌ಗಳಲ್ಲಿಯೂ ಲಭ್ಯ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://employmentnews.gov.in/

2. ಸರ್, ನನಗೆ 53 ವರ್ಷ ವಯಸ್ಸು. ನಾನು ಸರ್ಕಾರಿ ಶಾಲೆ ಶಿಕ್ಷಕನಾಗಿದ್ದು ಎಲ್‌ಎಲ್‌ಬಿ ಅಧ್ಯಯನ ನಡೆಸಲು ಇರುವ ಅವಕಾಶಗಳ ಬಗ್ಗೆ ದಯವಿಟ್ಟು ಮಾರ್ಗದರ್ಶನ ನೀಡಿ.

–ರವಿಕುಮಾರ್, ಬೆಂಗಳೂರು.

ನಮಗಿರುವ ಮಾಹಿತಿಯಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಾವಳಿಯಂತೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಲು ಇದ್ದ 30 ವರ್ಷದ ಗರಿಷ್ಠ ವಯೋಮಿತಿಯನ್ನು ಈಗ 45 ವರ್ಷದವರೆಗೆ ಸಡಿಲಿಸಲಾಗಿದೆ. ಆದರೂ, ಅನೇಕ ಕಾಲೇಜುಗಳಲ್ಲಿ ಹಳೆಯ ವಯೋಮಿತಿಯ ಉಲ್ಲೇಖವೇ ಇರುವುದು ನಮ್ಮ ಗಮನಕ್ಕೆ ಬಂದಿದೆ.

3. ಸರ್, ನಾನು ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಐಪಿಎಸ್ ಅಧಿಕಾರಿ ಆಗಬೇಕು ಅಂತ ಕನಸು ಕಂಡಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡರೆ ಯಾವ ಲೇಖಕರ ಪುಸ್ತಕಗಳನ್ನು ಓದಬೇಕು. ಹಾಗೇ, ಯುಪಿಎಸ್‌ಸಿ ಪಠ್ಯದ ಬಗ್ಗೆ ಮಾಹಿತಿ ನೀಡಿ.

–ಆದರ್ಶ್ ಎಚ್.ಎಸ್., ಊರು ತಿಳಿಸಿಲ್ಲ.

4. ನನಗೆ ಈಗ 27 ವರ್ಷ ವಯಸ್ಸು. ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದೀನಿ. ಆದರೆ ಈಗ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. 8 ತಾಸಿನ ಕೆಲಸದ ಜತೆಗೆ ಓದಬೇಕು ಎಂದು ನಿರ್ಧರಿಸಿದೆ; ಆದರೆ, ಓದಲು ಆಗುತ್ತಿಲ್ಲ. ದಯವಿಟ್ಟು ಯಾವುದಾದರೂ ಕೋಚಿಂಗ್ ಸೆಂಟರ್ ಬಗ್ಗೆ ತಿಳಿಸಿ. ಕೆಲಸದ ಜೊತೆಗೆ ನಾನು ಯುಪಿಎಸ್‌ಸಿ ಮಾಡಬಹುದೇ ಎಂಬ ಭಯ ಕಾಡುತ್ತಿದೆ. ದಯವಿಟ್ಟು ಸಲಹೆ ನೀಡಿ.

–ಸರಸ್ವತಿ ಕಾಡದೇವರ್, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಎಲ್ಲಾ ಪ್ರದೇಶಗಳಲ್ಲೂ ಇರುವ ಕೋಚಿಂಗ್ ಸೆಂಟರ್‌ಗಳಲ್ಲಿ ಯಾವುದನ್ನು ಸೇರಬೇಕೆನ್ನುವುದು ನಿಮ್ಮ ಆಯ್ಕೆ. ಯುಪಿಎಸ್‌ಸಿ ಪರೀಕ್ಷೆಗಳ ವಿವರ, ಪಠ್ಯಕ್ರಮ ಮತ್ತು ತಯಾರಿಯ ಬಗ್ಗೆ ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

5. ಸರ್, ನನಗೆ 53 ವರ್ಷ ವಯಸ್ಸು. ನಾನು ಸರ್ಕಾರಿ ಶಾಲೆ ಶಿಕ್ಷಕನಾಗಿದ್ದು ಎಲ್‌ಎಲ್‌ಬಿ ಅಧ್ಯಯನ ನಡೆಸಲು ಇರುವ ಅವಕಾಶಗಳ ಬಗ್ಗೆ ದಯವಿಟ್ಟು ಮಾರ್ಗದರ್ಶನ ನೀಡಿ.

–ರವಿಕುಮಾರ್, ಬೆಂಗಳೂರು.

ನಮಗಿರುವ ಮಾಹಿತಿಯಂತೆ ಬಾರ್ ಕೌನ್ಸಿಲ್ ಅಫ್ ಇಂಡಿಯ ನಿಯಮಾವಳಿಯಂತೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಲು ಇದ್ದ 30 ವರ್ಷದ ಗರಿಷ್ಠ ವಯೋಮಿತಿಯನ್ನು ಈಗ 45 ವರ್ಷದವರೆಗೆ ಸಡಿಲಿಸಲಾಗಿದೆ. ಆದರೂ, ಅನೇಕ ಕಾಲೇಜುಗಳಲ್ಲಿ ಹಳೆಯ ವಯೋಮಿತಿಯ ಉಲ್ಲೇಖವೇ ಇರುವುದು ನಮ್ಮ ಗಮನಕ್ಕೆ ಬಂದಿದೆ.

6. ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂತಿಮ ಬಿಪಿಇಡಿ ವ್ಯಾಸಂಗ ಮಾಡುತ್ತಿದ್ದೇನೆ. ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದಲೂ ಯಾವುದೇ ಸರ್ಕಾರಿ ಉದ್ಯೋಗಕ್ಕೆ ಬಡ್ತಿ ನೀಡುತ್ತಿಲ್ಲ. ಯಾವುದೇ ರೀತಿಯ ನೇಮಕಾತಿ ಪರೀಕ್ಷೆಗಳನ್ನೂ ನಡೆಸುತ್ತಿಲ್ಲ. ಹೀಗೇ ಆದರೆ ನಮ್ಮ ಗತಿ ಏನು; ಮುಂದೆ ನಾವೇನು ಮಾಡಬೇಕು?

–ನಿತೀನ್ ಕುಮಾರ್ ಕೆ.ಎಂ., ಊರು ತಿಳಿಸಿಲ್ಲ.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ಬಿಪಿಇಡಿ ಕೋರ್ಸ್ ಮಾಡಲು ನಿರ್ಧರಿಸಿದ್ದೀರಾ ಎಂಬುದು ತಿಳಿಯದು. ಬಿಪಿಇಡಿ ಕೋರ್ಸ್ ದೈಹಿಕ ಮತ್ತು ಮಾನಸಿಕ ಆರೋಗ್ಯ, ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕ್ಷೇತ್ರ. ಈ ಪದವಿಯ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‌ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬಂಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‌ಜಿಒ ಸಂಸ್ಥೆಗಳು, ಇತ್ಯಾದಿ ಕ್ಷೇತ್ರಗಳಲ್ಲಿ ಅಪರಿಮಿತ ಉದ್ಯೋಗಾವಕಾಶಗಳಿವೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಉದ್ಯೋಗವನ್ನೇ ನಂಬಿ ವೃತ್ತಿಜೀವನವನ್ನು ಅರಸುವುದು ಸೂಕ್ತವಲ್ಲ. ಹಾಗಾಗಿ, ಕೋರ್ಸ್ ಮುಗಿಸಿದ ನಂತರ ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆಯೂ ನಿಮ್ಮ ಗಮನವನ್ನು ಹರಿಸಿ.

7. ನಾನು ಬಿಎ ಪದವಿ ಮುಗಿಸಿದ್ದೇನೆ. ಮುಂದೆ ಬಿಎಡ್ ಓದಬೇಕೋ ಅಥವಾ ಎಂಎ ಮಾಡಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ ಸಲಹೆ ನೀಡಿ.

–ಸಂಗೀತಾ ನಾಯಕ್., ಊರು ತಿಳಿಸಿಲ್ಲ.

ವೃತ್ತಿಯ ಯೋಜನೆಯಿಲ್ಲದೆ ಕೋರ್ಸ್ ಆಯ್ಕೆ ಸೂಕ್ತವಲ್ಲ. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆಯನ್ನು ಮಾಡಿದರೆ, ಯಾವ ಕೋರ್ಸ್ ಮಾಡಬೇಕು ಎನ್ನುವುದು ಅರಿವಾಗುತ್ತದೆ ಮತ್ತು ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಇನ್ನೂ ಗೊಂದಲವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

8. ನಾನು 10ನೇ ತರಗತಿಯಲ್ಲಿ ಫೇಲ್ ಆಗಿರುತ್ತೇನೆ (1981-82). ಡೀಸೆಲ್ ಮೆಕ್ಯಾನಿಕ್ ಐಟಿಐ ಕೋರ್ಸ್ ಮುಗಿಸಿದ್ದೇನೆ (1982-83). ಸದ್ಯ ನಾನು ಸರ್ಕಾರಿ ನೌಕರ. ಸರ್ಕಾರವು ಎಸ್‌ಎಸ್‌ಎಲ್‌ಸಿ ಆಧಾರದಲ್ಲಿ ಬಡ್ತಿ ನೀಡುತ್ತಿದೆ. ಐಟಿಐ ಆಧಾರದಲ್ಲಿ ನನಗೆ ಬಡ್ತಿ ಸಿಗಬಹುದೇ? ಐಟಿಐಯನ್ನು ಎಸ್‌ಎಸ್‌ಎಲ್‌ಸಿಗೆ ಸಮ ಎಂದು ಸರ್ಕಾರ ಪರಿಗಣಿಸುತ್ತದೆಯೇ? ಉದಾಹರಣೆಗೆ: ದ್ವಿತೀಯ ಪಿಯುಸಿಯನ್ನು ಡಿಪ್ಲೊಮಾಗೆ ಸಮ ಎಂದು ಸರ್ಕಾರ ಹೇಳಿದೆಯಲ್ಲಾ?

–ರಾಘವೇಂದ್ರ, ಮೈಸೂರು.

ನೀವು ನೀಡಿರುವ ಮಾಹಿತಿಯಂತೆ ಒಂದು ವರ್ಷದ ಡಿಪ್ಲೊಮಾ ಮಾಡಿದ್ದೀರಿ. ಆದರೆ, ನಿಮ್ಮ ನೇಮಕಾತಿಯ ಹಿನ್ನೆಲೆ ತಿಳಿಯದು. ಹಾಗಾಗಿ, ಈ ವಿಚಾರದಲ್ಲಿ ನಿಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ, ಬಡ್ತಿ ಸಾಧ್ಯತೆಯನ್ನು ಪರಿಶೀಲಿಸಿ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಪ್ರಕಟವಾಗುವ ಎಂಪ್ಲಾಯ್‌ಮೆಂಟ್ ನ್ಯೂಸ್ ವಾರಪತ್ರಿಕೆಗೆ ನೀವು ಚಂದಾದಾರರಾಗಬಹುದು. ಈ ವಾರಪತ್ರಿಕೆ ಮುದ್ರಣ ಮಾಧ್ಯಮ ಮತ್ತು ಇ-ಪೇಪರ್ ಆವೃತ್ತಿಯಲ್ಲಿಯೂ ದೊರಕುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.