ಯಾದಗಿರಿ: ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಕೋವಿಡ್ ಕಾರಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

‘ಚೌಡಯ್ಯನವರು ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು’ ಎಂದು ಗಣ್ಯರು ಹೇಳಿದರು.

ಟೋಕ್ರಿ ಕೋಲಿ ಸಮಾಜ: ನಗರದ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.

‘ಚೌಡಯ್ಯ ಕೇವಲ ಕೋಲಿ ಸಮಾಜಕ್ಕೆ ಸೀಮಿತವಾಗಿಲ್ಲ. ಸರ್ವ ಸಮಾಜಕ್ಕೆ ಸೇರಿದ ಆಸ್ತಿ. 12ನೇ ಶತಮಾನದಲ್ಲಿಯೇ ಮೌಢ್ಯಾಚರಣೆ, ಕಂದಾಚಾರಗಳನ್ನು ಖಂಡಿಸಿದ್ದರು’ ಎಂದು ರಾಜ್ಯ ಕೋಲಿ ಸಂಘದ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ ಹೇಳಿದರು.

ಸಿವಿಲ್ ಪಿಎಸ್‌ಐ ಆಗಿ ಆಯ್ಕೆಯಾದ ಸಿದ್ದುಗೌಡ ಪಾಟೀಲ ಶರಣಪ್ಪ ಪಾಟೀಲ ತಳವಾರ (ಗೌರ ಬಿ) ಅಫಜಲಪುರ ಅವರನ್ನು ಸನ್ಮಾನಿಸಲಾಯಿತು.

ರಾಮಲಿಂಗಪ್ಪ ಧರ್ಮಪುರ, ಮಲ್ಲಿಕಾರ್ಜುನ ಗಡ್ಡಿಮನಿ ಬೆಳಗೇರಾ, ಸಾಬಣ್ಣ ಕೊಂಕಲ್, ಮಂಜುನಾಥ ಮಡ್ಡೆರ್, ಮರಲಿಂಗಪ್ಪ, ಅಶೋಕ್ ಜಾಧವ್, ಮರೆಪ್ಪ ಬಂದಳ್ಳಿ ಹಕ್ಕಿ, ಬಸಪ್ಪ ಕಾವಲಿ, ಶರಣಪ್ಪ, ಸುರೇಶ್ ಮುಸ್ಟೂರು, ಶರಣಪ್ಪ ಪೂಜಾರಿ, ನಿಂಗಪ್ಪ ಗಿರಣಿ, ಹಣಮಂತ ಬಳಿಚಕ್ರ ಇದ್ದರು.

ಬಿಜೆಪಿ ಜಿಲ್ಲಾ ಕಚೇರಿ: ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಪ್ರಯುಕ್ತ ದಾಸೋಹ ದಿನ ಆಚರಿಸಲಾಯಿತು. ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರ ಮಂಡಲ ಅಧ್ಯಕ್ಷ ಸುರೇಶ್ ಅಂಬಿಗೇರ, ನಗರಸಭೆ ಸದಸ್ಯ ಅಂಬಯ್ಯ ಶಾಬಾದಿ, ಸ್ವಾಮಿದೇವ ದಾಸನಕೇರಿ, ನಾಮನಿರ್ದೇಶನ ನಗರಸಭೆ ಸದಸ್ಯ ಆನಂದ್ ಗಡ್ಡಿಮನಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ರಿಯಾಜ್ ಕೊಲ್ಲೂರು, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಜಿಮ್ಮಿ, ಯುವ ಮೋರ್ಚಾ ನಗರ ಮಂಡಲ ಉಪಾಧ್ಯಕ್ಷ ಗುರು ಇದ್ದರು.

ಭಾವಚಿತ್ರಕ್ಕೆ ಪೂಜೆ

ಸೈದಾಪುರ: ಪಟ್ಟಣದ ಗುರುಕುಲ ವಿದ್ಯಾ ಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಿಕ್ಷಕಿಯರಾದ ಮರಿಲಿಂಗಮ್ಮ, ಮಹೇಶ್ವರಿ, ನೇತ್ರಾವತಿ, ಆಸೀಫಾ, ಶೃತಿ ಹಾಗೂ ವಿದ್ಯಾರ್ಥಿಗಳು ಇದ್ದರು.

ನೇತಾಜಿ ಶಾಲೆ: ಪಟ್ಟಣದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕ ಅರುಣ ಕುಮಾರ ಜೇಗರ್ ಮಾತನಾಡಿ,‘ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು’ ಎಂದು ಹೇಳಿದರು. ಶಿಕ್ಷಕರಾದ ದೇವಿಂದ್ರಪ್ಪ, ಸೋನಾಲಿ, ಪೂಜಾ, ನಜೀಯಾ, ಪ್ರಿಯಾಂಕ, ಸಂಗೀತಾ, ವಿದ್ಯಾರ್ಥಿಗಳು ಇದ್ದರು.

ಹೆಗ್ಗಣಗೇರಾ: ಸಮೀಪದ ಹೆಗ್ಗಣಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಲಿಂಗಾರೆಡ್ಡಿ ಗಬ್ಬೂರ, ಎಸ್‍ಡಿಎಂಸಿ ಅಧ್ಯಕ್ಷ ಸಾಹೇಬಗೌಡ ಕಲಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಸಲಿಂಗಮ್ಮ ಕಲಾಲ್, ಮಂಜುಳಾ ದಳವಾಯಿ, ತಾಯಮ್ಮ ಹಜೇರಿ, ಲಕ್ಷ್ಮೀ ಬಡಿಗೇರಾ, ಬಸವರಾಜಪ್ಪಗೌಡ, ಸುಭಾಶ್ಚಂದ್ರ ಬಾಗ್ಲಿ, ಮಲ್ಲಪ್ಪ ಬಾಗ್ಲಿ, ಗೋಕುಲಪ್ಪ ಗೋಪಾಳಿ, ಯಂಕಪ್ಪ ಗೋಪಾಳಿ, ರಮೇಶ ಸೇರಿದಂತೆ ಇತರರು ಈ ವೇಳೆ ಇದ್ದರು.

ಮಾಧ್ವಾರ: ಸಮೀಪದ ಮಾಧ್ವಾರ ಗ್ರಾಮದ ಸರ್.ಎಂ.ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಮಲ್ಲು ಮೇಸ್ತ್ರಿ ಮಾತನಾಡಿದರು. ಮುಖ್ಯಶಿಕ್ಷಕ ಶ್ರೀನಿವಾಸ, ಶಶಿಕಲಾ, ಚನ್ನಪ್ಪ, ಶಾಂತರಾಜು, ಚಂದ್ರಕಲಾ, ಸ್ವಾತಿ, ಶ್ರಾವಣಿ, ಅಂಬಿಕಾ, ವರ್ಷ ಇದ್ದರು.

ಜಿಲ್ಲಾಡಳಿತದಿಂದ ಸರಳ ಆಚರಣೆ

ಯಾದಗಿರಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೋಲಿ ಸಮಾಜದ ಮುಖಂಡರಾದ ಸಿ.ಎಂ.ಪಟ್ಟೇದಾರ, ಹನುಮಂತ ಮಡ್ಡಿ, ಉಮೇಶ.ಕೆ ಮುದ್ನಾಳ, ನಾಗರತ್ನ ಅನಪುರ, ಚಂದ್ರಶೇಖರ ಬಾಡಿಯಾಳ, ದೇವಿಂದ್ರಪ್ಪ ಬೆಸ್ತ, ಬಸವರಾಜ ಮಾನೇಗಾರ, ಭೀಮರೆಡ್ಡಿ ಹಾಗೂ ಆಂಜನೇಯ ಕಟ್ಟಿಮನಿ ಇದ್ದರು.

ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಕೋವಿಡ್ ಕಾರಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.