×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ವಿವಿಧೆಡೆ ಆಯುಧ ಪೂಜೆ ಸಂಭ್ರಮ, ಬೈಕ್ ಗಳಿಗೆ ಅಲಂಕಾರ

ಫಾಲೋ ಮಾಡಿ
Comments

ಯಾದಗಿರಿ: ನವರಾತ್ರಿ ಹಬ್ಬದ ಅಂಗವಾಗಿ ಗುರುವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಯುಧ ಪೂಜೆ ಮಾಡಲಾಯಿತು.

ಬೈಕ್ ಮತ್ತು ಕಾರು ಶೋ ರೂಂಗಳಲ್ಲಿ ಮುಂಗಡವಾಗಿ ಬುಕಿಂಗ್ ಮಾಡಿದ ವಾಹನಗಳನ್ನು ಖರೀದಿಸಿ ದೇವಸ್ಥಾನ, ಮಠಗಳಲ್ಲಿ ಗ್ರಾಹಕರು ಪೂಜೆ ಸಲ್ಲಿಸಿದರು. ವಾಹನಗಳಿಗೆ ಹೂಗಳಿಂದ ಅಲಂಕರಿಸಲಾಗಿತ್ತು.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರಮುಖ ವೃತ್ತಗಳಲ್ಲಿ ಚೆಂಡು ಹೂ, ಬಾಳೆದಿಂಡು, ಕುಂಬಳಕಾಯಿ ಸೇರಿದಂತೆ ಪೂಜಾ ಸಮಾಗ್ರಿ ಮಾರಾಟಕ್ಕೆ ಇಡಲಾಗಿತ್ತು.

ಕಚೇರಿಗಳನ್ನು ಸ್ವಚ್ಛ ಮಾಡಿ ಪೂಜೆ ಸಲ್ಲಿಸಲಾಯಿತು. 

ಆನೆ ಅಂಬಾರಿ ಮೆರವಣಿಗೆಗೆ ಸಿದ್ಧತೆ: ನಗರದ ರೈಲ್ವೆ ಸ್ಟೇಷನ್ ರಸ್ತೆಯ ಅಂಭಾ ಭವಾನಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ಶುಕ್ರವಾರ (ಅ.15) ರಂದು ಹಿಂದೂ ಸೇವಾ ಸಮಿತಿಯಿಂದ ಶೋಭಾ ಯಾತ್ರೆ ನಡೆಯಲಿದೆ. ಆನೆ ಅಂಬಾರಿ ಮೆರವಣಿಗೆಯೂ ನಡೆಯಲಿದ್ದು, ಸಿದ್ಧತೆಗಳು ನಡೆದಿವೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಮಠದಿಂದ ಆನೆ ಕರೆ ತರಲಾಗುತ್ತಿದೆ. ಅಲ್ಲದೇ ಗುರುವಾರ ರಾತ್ರಿ ದಾಂಡಿಯಾ ನೃತ್ಯ ಸಮಾರೋಪ ನಡೆಯಲಿದೆ‌.

ಯರಗೋಳ ವರದಿ: ಯರಗೋಳ ಗ್ರಾಮದಲ್ಲಿ ಗುರುವಾರ ಆಯುಧ ಪೂಜೆ ಸಂಭ್ರಮ ಜೋರಾಗಿತ್ತು. ಕೃಷಿಕರು ತಮ್ಮ ತಮ್ಮ ಕೃಷಿ ಪರಿಕರಗಳಿಗೆ ಪೂಜೆ ನೆರವೇರಿಸಿದರು.

ಟ್ರ್ಯಾಕ್ಟರ್, ಜೀಪು, ಕ್ರೂಸರ್ , ಟಂಟಂ ಬೈಕ್ ಗಳನ್ನು ತೊಳೆದು ಹೂ, ಬಾಳೆ ಗೊನೆ, ಮಾವಿನ ತಪ್ಪಲು, ಲಿಂಬೆಹಣ್ಣು, ತೆಂಗಿನ ಗರಿಯಿಂದ ಶೃಂಗರಿಸಿ ಕುಂಬಳಕಾಯಿ ಒಡೆದು, ನೈವೇದ್ಯ ಅರ್ಪಿಸಿದರು. 

ಕುಲ ಕಸುಬುದಾರರಾದ ಕಮ್ಮಾರ, ಕುಂಬಾರ, ಚಮ್ಮಾರ, ಬಡಿಗೇರ, ಸಿಂಪಿಗ, ಈಡಿಗ, ಹಡಪದ, ಹೂಗಾರ, ಹಗಲು ವೇಷ, ಬಣಜಿಗ, ಅಗಸ, ಅಕ್ಕಸಾಲಿಗ,  ಕೊರವ, ಅಂಬಿಗ ಸಮುದಾಯದವರು ತಮ್ಮ ಆಯುಧಗಳನ್ನು ಪೂಜಿಸಿದರು.

ಇನ್ನು ಮಹಿಳೆಯರು ಮನೆಯಲ್ಲಿ ತಾಯಿ ದುರ್ಗಾ ದೇವಿಯನ್ನು ಪೂಜಿಸಿ ಮುತೈದೆಯರಿಗೆ ಅರಿಸಿನ, ಕುಂಕುಮ ಹಚ್ಚಿ ಉಡಿ ತುಂಬಿ ಪಾದಕ್ಕೆ ನಮಸ್ಕರಿಸಿದರು.

ಪುಟಾಣಿ ಮಕ್ಕಳು, ಯುವಕರು, ಯುವತಿಯರು ವಾಹನಗಳ ಮುಂದೆ ನಿಂತು ಫೋಟೋ ಕ್ಲಿಕ್ಲಿಸಿ ಸಂತೋಷ ಪಟ್ಟರು.

ಅಬ್ಬೆ ತುಮಕೂರು ವಿಶ್ವಾರಾಧ್ಯರ ಮಠದಲ್ಲಿ  ಭಕ್ತರು ತಮ್ಮ ನೂತನ ವಾಹನಗಳಿಗೆ ಪೂಜೆ ನೆರವೇರಿಸಿದರು. 

ಗ್ರಾಮದ ಮನೆಗಳಲ್ಲಿ ಸಿಹಿ ತಿನಿಸುಗಳಾದ ಹೋಳಿಗೆ, ಕಡುಬು, ಅನ್ನ, ಸಾಂಬರ್, ಬಜಿ, ಹಪ್ಪಳ, ಸಂಡಿಗೆ ತಯಾರಿಸಲಾಗಿತ್ತು.

ನವರಾತ್ರಿ ಹಬ್ಬದ ಅಂಗವಾಗಿ ಗುರುವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಯುಧ ಪೂಜೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT