×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಪ್ರಯತ್ನದಲ್ಲೇ ಯಶಸ್ಸು

Published : 21 ಜನವರಿ 2022, 5:52 IST
ಫಾಲೋ ಮಾಡಿ
Comments

ಕಕ್ಕೇರಾ: ವಲಯದ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಎಸ್ಕೆ ಗ್ರಾಮದ ನಾಗರತ್ನ ಮಕಾಶಿ ಅವರು ಪೊಲೀಸ್‍ ಸಬ್‍ ಇನ್‌ಸ್ಪೆಕ್ಟರ್ (ಸಿವಿಲ್‍) ಹುದ್ದೆಗಳಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.

ನಾಗರತ್ನ ಮಕಾಶಿ ಅವರು ಪ್ರಾಥಮಿಕ, ಪ್ರೌಢಶಾಲಾ, ಪಿಯುಸಿ, ಪದವಿ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ತೋರಿದ್ದರು. ‘ಬಾಲ್ಯದಿಂದಲೂ ಪೊಲೀಸ್ ಇಲಾಖೆ ಸೇರಬೇಕು ಎಂದು ಕನಸು ಕಂಡಿದ್ದೆ, ಈಗ ನನಸಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆರಕ್ಷಕ ಉಪ ನಿರೀಕ್ಷಕ ಪರೀಕ್ಷೆಯಲ್ಲಿ ಪ್ರಥಮ ಪತ್ರಿಕೆಯ ಲಿಖಿತ ಪರೀಕ್ಷೆಯಲ್ಲಿ 50 ಅಂಕಗಳಿಗೆ 34.5 ಹಾಗೂ ದ್ವಿತೀಯ ಪತ್ರಿಕೆಯ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಯಲ್ಲಿ 150 ಅಂಕಗಳಿಗೆ 82.125 ಅಂಕಗಳನ್ನು ಪಡೆದು ಒಟ್ಟು ಪ್ರತಿಶತ 116.125 ಅಂಕಗಳೊಂದಿಗೆ ಉತ್ತಮ ಫಲಿತಾಂಶ ಪಡೆದು ಎಸ್‌ಟಿ ಕೋಟಾದಡಿ ಆಯ್ಕೆಯಾಗಿದ್ದಾರೆ.

ಪಿಎಸ್ಐ ಸ್ಥಾನಕ್ಕೆ ಆಯ್ಕೆಯಾದ ಹಳ್ಳಿ ಪ್ರತಿಭೆ ನಾಗರತ್ನ ಮಕಾಶಿ ಅವರ ಬಗ್ಗೆ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಂಗಾಧರನಾಯಕ, ವೆಂಕಟೇಶ ಬೇಟೆಗಾರ, ರಮೇಶ ದೊರೆ ಆಲ್ದಾಳ್, ಸೋಮನಾಥ ಡೊಣ್ಣಿಗೇರಿ, ತಿಂಥಣಿಯ ಮಾನಯ್ಯ ಕವಾಲ್ದಾರ್, ಲಿಂಗದಳ್ಳಿಯ ಶರಣು ಮಕಾಶಿ, ಸದಾಶಿವ ಲಿಂಗದಳ್ಳಿ, ಪರಮಣ್ಣ ವಡಿಕೇರಿ, ಶರಣಗೌಡ್ರು ಗುರಿಕಾರ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

ಕಕ್ಕೇರಾ: ವಲಯದ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಎಸ್ಕೆ ಗ್ರಾಮದ ನಾಗರತ್ನ ಮಕಾಶಿ ಅವರು ಪೊಲೀಸ್‍ ಸಬ್‍ ಇನ್‌ಸ್ಪೆಕ್ಟರ್ (ಸಿವಿಲ್‍) ಹುದ್ದೆಗಳಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT