ವಿಜಯಪುರ: ಸಚಿವ ಗೋವಿಂದ ಕಾರಜೋಳ ಅವರು ಶಾಸಕ ಎಂ.ಬಿ.ಪಾಟೀಲ ವಿರುದ್ಧ ದಲಿತರನ್ನು ಅನಗತ್ಯವಾಗಿ ಎತ್ತಿಕಟ್ಟಿ, ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸುವುದು, ಬೆದರಿಕೆ ಹಾಕಿಸುವುದು, ತೇಜೋವಧೆ ಮಾಡಿಸುವುದು, ಪ್ರತಿಕೃತಿ ಸುಡುವುದು, ಮನೆಗೆ ಮುತ್ತಿಗೆ ಹಾಕಿಸುವುದನ್ನು ನಿಲ್ಲಿಸಬೇಕು ಎಂದು ಎಂ.ಬಿ.ಪಾಟೀಲ ಬೆಂಬಲಿಗರು ಒಕ್ಕೊರಲಿನಿಂದ ಆಗ್ರಹಿಸಿದರು.