×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರದಲ್ಲಿಯೇ ಮೀಸಲಾತಿ: ಯತ್ನಾಳ್‌

Published : 20 ಮಾರ್ಚ್ 2023, 5:47 IST
Last Updated : 20 ಮಾರ್ಚ್ 2023, 5:47 IST
ಫಾಲೋ ಮಾಡಿ
Comments

ಕುಕನೂರು: ‘ಮಾ. 23ರಂದು ಜರುಗುವ ಸಚಿವ ಸಂಪುಟದ ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ನಂಬಿಕೆ ಇದೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರವಸೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಅನಾವರಣಗೊಳಿಸಿ ಮಾತನಾಡಿ ‘ಪಂಚಮಸಾಲಿ ಸಮಾಜ ಎಲ್ಲ  ಕಡೆಯೂ ಇದೆ. ಈ ಸಮಾಜವನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ. ನಾನು ಸಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದರು.

‘ಕೇವಲ ಸುಳ್ಳು ಭರವಸೆ ನೀಡಿ ಕಾಲ ತಳ್ಳುತ್ತ ಮುಂದೆ ಹೋದರೆ ಆಗುವುದಿಲ್ಲ. ಮೀಸಲಾತಿ ನೀಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಮಾ. 23ರ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ. ಕೆಲವರು ಸಮಾಜದ ಹೆಸರು ಹೇಳಿಕೊಂಡು ಸಾವಿರಾರು ಕೋಟಿ  ಆಸ್ತಿ ಮಾಡಿಕೊಳ್ಳುತ್ತಾರೆ’ ಎಂದು ಟೀಕಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ರಾಷ್ಟ್ರ ಅಭಿವೃದ್ಧಿ ಆಗುತ್ತಿದೆ. ಪಂಚಮಸಾಲಿ ಸಮಾಜವನ್ನು ಬಿ.ಎಸ್‌. ಯಡಿಯೂರಪ್ಪ ಅವರು ಜಾತಿಪಟ್ಟಿಯಲ್ಲಿ ಸೇರಿಸಿದರು’ ಎಂದರು.

ಬಸವರಾಜ್ ದಿಂಡೂರು, ವೀರಣ್ಣ ಹುಬ್ಬಳ್ಳಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ಮಾಜಿ ಅಧ್ಯಕ್ಷ ಬಸಲಿಂಗಪ್ಪ ಭೂತೆ, ಕುಕನೂರು ತಾಲ್ಲೂಕು ಅಧ್ಯಕ್ಷ ವೀರಣ್ಣ ಅಣ್ಣಿಗೇರಿ, ಸಮಾಜದ ಪ್ರಮುಖರಾದ ಕೆ.ಜಿ. ಪಲ್ಲೇದ, ಕರಿಯಪ್ಪ ಮೇಟಿ, ರುದ್ರಗೌಡ ಪಾಟೀಲ್, ಶರಣಪ್ಪ ಹಳ್ಳಿ,ಕಳಕನಗೌಡ ಪಾಟೀಲ್, ನವೀನ ಗುಳಗಣ್ಣವರ್, ಅಶೋಕ ತೋಟದ, ಬಸವರಾಜ ಹಳ್ಳಿ, ಬಸವರಾಜ ಉಳ್ಳಾಗಡ್ಡಿ, ಸಾಹಿತಿಗಳಾದ ಬಿ.ಎಮ್ ಹಳ್ಳಿ, ಡಾ.ಕೆ.ಬಿ ಬ್ಯಾಳಿ,‌ ಕೊಟ್ರಪ್ಪ ತೋಟದ, ಪ್ರಕಾಶ ಬೆಲೇರಿ, ಬಸವಪ್ರಭು ಪಾಟೀಲ್, ದೊಡ್ಡಬಸಪ್ಪ ಭಾವಿಮನಿ, ವಿಶ್ವನಾಥ ಮರಿಬಸಪ್ಪನವರ್,‌ ಮಹೇಶ ದಾಸರ, ವೀರಣ್ಣ ಹಳ್ಳಿಕೇರಿ, ರಾಜಶೇಖರ ಹಳ್ಳಿ, ಬಸವಂತಪ್ಪ ಮಹಾಂತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT