ಯಲ್ಲಾಪುರ: ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ಪೇಂಟ್ಗೆ ಬಳಸುವ 'ಪೆಂಜೈನ್' ರಾಸಾಯನಿಕವನ್ನು ಮಂಗಳೂರಿನಿಂದ ಮುಂಬೈಗೆ ಟ್ಯಾಂಕರ್ನಲ್ಲಿ ಸಾಗಿಸಲಾಗುತ್ತಿತ್ತು. ಕಡಿದಾದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿ ಸೋರಿದ ರಾಸಾಯನಿಕವು ಪಕ್ಕದ ಹಳ್ಳ ಹಾಗೂ ಕಾಲುವೆಗಳಲ್ಲಿ ಹರಿದಿದೆ. ಯಾವುದೋ ಕಾರಣಕ್ಕೆ ಇದಕ್ಕೆ ಬೆಂಕಿ ತಗುಲಿದ್ದು ಹಳ್ಳವೇ ಹೊತ್ತಿ ಉರಿದಿದೆ. ಬೆಂಕಿ ಟ್ಯಾಂಕರ್ಗೂ ತಗುಲಿದೆ. ಹಳ್ಳದ ಭತ್ತದ ಗದ್ದೆ, ಪಂಪ್ ಸೆಟ್ ಸುಟ್ಟು ಕರಕಲಾಗಿವೆ. ತೋಟದಲ್ಲಿದ್ದ ಗಿಡಗಳಿಗೂ ಬೆಂಕಿ ತಗುಲಿದೆ. ಟ್ಯಾಂಕರ್ ಚಾಲಕ, ಸಹ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

–ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ದೊಡ್ಡ ಶಬ್ದದೊಂದಿಗೆ ಬೆಂಕಿ: ಟ್ಯಾಂಕರ್ ಅಪಘಾತವಾಗುತ್ತಿದ್ದಂತೆ, ಸೋರಿದ ರಾಸಾಯನಿಕಕ್ಕೆ ಬೆಂಕಿ ತಗುಲಿದ ಸದ್ದು ಒಂದೆರಡು ಕಿಲೋಮೀಟರ್ವರೆಗೂ ಕೇಳಿಸಿದೆ. ಮನೆಗಳಲ್ಲಿದ್ದ ಜನ ಗಾಬರಿಯಿಂದ ಹೊರ ಬಂದು ನೋಡಿದರೆ ಹಳ್ಳ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಬಂದು ಕಂಗಾಲಾಗಿದ್ದಾರೆ.

ಬಾಳೆಗದ್ದೆ ದೇವಸ್ಥಾನದ ಪಕ್ಕದಲ್ಲಿರುವ ಗೃಹರಕ್ಷಕ ಎಸ್.ಎಸ್.ಭಟ್ಟ ಅವರ, ಸುಮಾರು ಐದಾರು ಗುಂಟೆ ಹಚ್ಚ ಹಸಿರಾಗಿ ಬೆಳೆದಿದ್ದ ಭತ್ತದ ಗದ್ದೆ ಯಾವುದೇ ಅವಶೇಷವೂ ಇಲ್ಲದಂತೆ ಕರಕಲಾಗಿದೆ. ಬಾವಿಗೆ ಹಾಕಿದ ಪಂಪ್ಸೆಟ್ ಸುಟ್ಟು ಕರಕಲಾಗಿದೆ. ತೋಟದಲ್ಲಿದ್ದ ಅಡಿಕೆ ಮರ, ತೆಂಗಿನ ಮರ, ಮಾವು, ಹಲಸಿನ ಮರ, ಅಂಬೆ ಮರ ಮುಂತಾದ ಮರಗಳಿಗೆ ಬೆಂಕಿ ತಗುಲಿದೆ. ಮನೆಯ ಒಂದು ಪಾರ್ಶ್ವಕ್ಕೂ ಬೆಂಕಿ ತಗುಲಿದ್ದು, ತಕ್ಷಣ ಆರಿಸಲಾಗಿದೆ. ಇದೇ ರೀತಿ ಮಂಜುನಾಥ ಗೌಡ, ನಾರಾಯಣ ಭಟ್ಟ, ವಿಶ್ವನಾಥ ಭಟ್ಟ ಮುಂತಾದವರ ತೋಟ ಗದ್ದೆಗಳಿಗೂ ಹಾನಿಯಾಗಿದೆ.

ಬೆಳಿಗ್ಗೆ ಸುಮಾರು 5.30ರ ಸಮಯ, ಇನ್ನೂ ಕತ್ತಲಿತ್ತು. ಒಮ್ಮೆಲೇ ಜೋರಾಗಿ ಸದ್ದು ಕೇಳಿ ಬಂತು, ಗಾಬರಿಗೊಂಡು ನೋಡಿದಾಗ ಹಳ್ಳ ಕಾಲುವೆ ಹೊತ್ತಿ ಉರಿಯುತ್ತಿತ್ತು. ಬಾಗಿಲುಗಳು ಸದ್ದು ಮಾಡಿದವು. ಪಂಪ್ ಸೆಟ್ ಸುಟ್ಟು ಹೋಗಿ ಬಾವಿಯ ಮೇಲೆ ಹಾಕಿದ ಮುಚ್ಚಳ ಸರಿದು ಬಿದ್ದಿತ್ತು. ಪಕ್ಕೆದಲ್ಲೇ ಇದ್ದ ಮನೆಯ ಪಾರ್ಶ್ವಕ್ಕೆ ಬೆಂಕಿ ತಗುಲಿದ್ದನ್ನು ತಕ್ಷಣ ಆರಿಸಿ ಮುಂದಾಗುವ ಅಪಾಯವನ್ನು ತಪ್ಪಿಸಿದೆ. ಕಾಲಿಲುವೆಯಲ್ಲಿ ಸುಮಾರು 20 ಅಡಿ, ಹಳ್ಳದಲ್ಲಿ ಸುಮಾರು 50 ಅಡಿಗೂ ಹೆಚ್ಚು ಎತ್ತರಕ್ಕೆ ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿಯುವ ದೃಶ್ಯ ಕಂಡು ಬಂತು' ಎನ್.ಎಸ್.ಭಟ್ ತಿಳಿಸಿದರು.

–ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಸಂಚಾರ ಸ್ಥಗಿತ: ಅಪಘಾತವಾದ ಬೆಳಗ್ಗಿನ ಜಾವ 5.30ರಿಂದ 8 ಗಂಟೆಯವರೆಗೂ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಯಲ್ಲಾಪುರ, ಮುಂಡಗೋಡು, ಶಿರಸಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ಆರಿಸಿದ ನಂತರ ಸಂಚಾರ ವ್ಯವಸ್ಥೆ ಪುನರಾರಂಭಿಸಲಾಯಿತು.

ಅಪಘಾತ ಸ್ಥಳಕ್ಕೆ ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲ್ಲಾಪುರ ಪಿ.ಐ. ಸುರೇಶ್ ಯಳ್ಳೂರ್ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಪ್ರಿಯಾಂಕಾ ನ್ಯಾಮಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ನೆರವಾದರು.

ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.