ಶಿರಸಿ: ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈಚೆಗೆ ಧ್ರುವತಾರೆ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ 54 ಜನರು ನೇತ್ರದಾನದ ವಾಗ್ದಾನ ಮಾಡಿ, ನೋಂದಣಿ ಮಾಡಿಸಿದರು.

ರಕ್ತದಾನ ಶಿಬಿರದಲ್ಲಿ 34 ಸದಸ್ಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಇದೇ ವೇಳೆ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಗಣೇಶ್ ಬರೆದ ‘ರೆಕ್ಕೆಗಳಿದ್ದರೆ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ‘ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಕೆಲಸಗಳು, ಚಿಂತನೆಗಳು ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು. ಪರೋಪಕಾರಿ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದರು.

ಶಿಕ್ಷಕ ತಮ್ಮಣ್ಣ ಬಿರದಾರ, ಸಮಾಜ ಸೇವಕ ಎಸ್.ಎನ್.ಹೆಗಡೆ ದೊಡ್ನಳ್ಳಿ, ಪ್ರದೀಪ ಎಲ್ಲನಕರ್, ಹೂವಿನ ವ್ಯಾಪಾರಿ ಇಸ್ಮಾಯಿಲ್, ಅಗರಬತ್ತಿ ವ್ಯಾಪಾರಿ ವಿನಾಯಕ ಹೆಗಡೆ, ಶ್ರಮಜೀವಿ ಗೌರಿ ಚಂದ್ರಶೇಖರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ದೀಪಕ್ ದೊಡ್ಡೂರ್, ಡಾ.ಸುಮನ್ ಹೆಗಡೆ, ಡಾ.ಕೆ.ವಿ.ಶಿವರಾಂ, ಡಾ.ರಾಘವೆಂದ್ರ ಕಾಮತ್, ನಗರಸಭೆ ಸದಸ್ಯ ರಾಘವೇಂದ್ರ ಶೆಟ್ಟಿ, ಜಿ.ಎ.ಹೆಗಡೆ ಸೋಂದಾ, ಪತ್ರಕರ್ತರಾದ ಜಿ.ಸುಬ್ರಾಯ ಭಟ್ ಬಕ್ಕಳ, ಜೆ.ಆರ್.ಸಂತೋಷಕುಮಾರ್, ಸಾಹಿತಿ ದತ್ತಗುರು ಕಂಠಿ ಇದ್ದರು. ಮಹೇಶಕುಮಾರ ಹನಕೆರೆ, ಮಂಜು ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಶಿರಸಿ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈಚೆಗೆ ಧ್ರುವತಾರೆ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ 54 ಜನರು ನೇತ್ರದಾನದ ವಾಗ್ದಾನ ಮಾಡಿ, ನೋಂದಣಿ ಮಾಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.