ಶಿವಮೊಗ್ಗ: ಸಾಗರ ತಾಲ್ಲೂಕಿನ ಸಿಗಂದೂರು–ತುಮರಿ ಸೇತುವೆ ಕಾಮಗಾರಿಗಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವನ್ನು 1,760 ಅಡಿಗೆ ತಗ್ಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಕೆಪಿಸಿಗೆ ಪತ್ರ ಬರೆದಿರುವುದು ವಿವಾದ ಹುಟ್ಟುಹಾಕಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 151.64 ಟಿಎಂಸಿ ಅಡಿ ನೀರಿದೆ. (ಸಮುದ್ರಮಟ್ಟದಿಂದ 1804.15 ಅಡಿ) ಹೆದ್ದಾರಿ ಪ್ರಾಧಿಕಾರದ ಪತ್ರಕ್ಕೆ ಕೆಪಿಸಿ ಮನ್ನಣೆ ನೀಡಿದರೆ 60 ಟಿಎಂಸಿ ಅಡಿ ನೀರು ಹೊರಗೆ ಹಾಕಬೇಕಾಗುತ್ತದೆ. ಇದು ಬೇಸಿಗೆ ಸಮಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿದೆ.