×
ADVERTISEMENT
ಈ ಕ್ಷಣ :
ADVERTISEMENT

ಪೌರಾಣಿಕ ನಾಟಕ ಅಭಿನಯ: ಮಂಡ್ಯ ಮುಂದು

ರಾಜ್ಯಮಟ್ಟದ ಗ್ರಾಮೀಣ ಪೌರಾಣಿಕ ನಾಟಕೋತ್ಸ; ಚಾಲನೆ ನೀಡಿದ ಬಿ.ಎಂ.ಅಪ್ಪಾಜಪ್ಪ ಶ್ಲಾಘನೆ
ಫಾಲೋ ಮಾಡಿ
Comments

ಮಂಡ್ಯ: ರಂಗಭೂಮಿ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯು ಹೆಸರುವಾಸಿಯಾಗಿದ್ದು, ಇಲ್ಲಿನ ಕಲಾವಿದರು ನಿಷ್ಠೆಯಿಂದ ಕಲಿಕೆಯಲ್ಲಿ ತೊಡಗಿ ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದು ಲಯನ್ಸ್‌ನ ಸಾಂಸ್ಕೃತಿಕ ರಾಯಭಾರಿ ಬಿ.ಎಂ.ಅಪ್ಪಾಜಪ್ಪ ಹೇಳಿದರು.

ನಗರದ ಕಲಾಮಂದಿರದಲ್ಲಿ ಶ್ರೀ ರೇವಣ್ಣ ಸಿದ್ದೇಶ್ವರ ಕಲಾ ಸಂಘ, ಹೊಸಹಳ್ಳಿ ಗುರುಮಠ, ವಜ್ರೇಶ್ವರಿ ಡ್ರಾಮಾ ಸೀನರಿ ಸಹಯೋಗದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಗ್ರಾಮೀಣ ಪೌರಾಣಿಕ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರಾಣಿಕ ನಾಟಕಗಳಲ್ಲಿ ಮಂಡ್ಯ ಮಣ್ಣಿನ ಮಕ್ಕಳು ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಉತ್ತಮ ಕಲಾವಿದರು ತಮ್ಮದೇ ಶೈಲಿಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡು ರಂಗಭೂಮಿ ಕ್ಷೇತ್ರದ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸುತ್ತಿದ್ದಾರೆ. ಮತ್ತಷ್ಟು ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾಟಕಗಳ ಮೂಲಕ ಕಲೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಮನಗರದ ಅರ್ಚಕರಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಗಾಂಧಿ ನಾಗರಾಜು ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ. ಈಗ ಸರ್ಕಾರದ ಕೋವಿಡ್‌ ನಿಯಮಗಳಡಿ ಕಾರ್ಯಕ್ರಮ ಮಾಡಲು ಅವಕಾಶ ಸಿಕ್ಕಿದೆ. ಇದರಿಂದ ಕಲಾವಿದರು ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕಲಾವಿದರಿಗೆ ಮತ್ತಷ್ಟು ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದರು.

ಕಲಾಮಂದಿರದಲ್ಲಿ 27 ದಿನ ನಡೆಯುವ ರಾಜ್ಯಮಟ್ಟದ ಗ್ರಾಮೀಣ ಪೌರಾಣಿಕ ನಾಟಕೋತ್ಸವದಲ್ಲಿ ಹಲವಾರು ಕಲಾವಿದರು ಅಭಿನಯಿಸಲಿದ್ದು, ಮೊದಲ ದಿನವಾದ ಶನಿವಾರ ‘ಶನಿಪ್ರಭಾವ ಅಥವಾ ರಾಜವಿಕ್ರಮ’ ಪೌರಾಣಿಕ ನಾಟಕವನ್ನು ರಾಮನಗರದ ಚಾಮುಂಡೇಶ್ವರಿ ಕಲಾ ಬಳಗದ ಕಲಾವಿದರು ಪ್ರದರ್ಶಿಸಿದರು.

ವಜ್ರೇಶ್ವರಿ ಕಂಬೈನ್ಸ್‌ ಮಾಲೀಕ ಚೇತನ್‌, ಕಲಾ ಬಳಗದ ಗೋಪಾಲ್‌, ಹನುಂತೇಗೌಡ, ಧನರಾಜ್‌, ವೆಂಕಟೇಶ್‌, ಗುರುಮಾದಪ್ಪ, ರೇವಣ್ಣ, ನಾಗಣ್ಣ, ನಾಟಕದ ಮೇಷ್ಟ್ರು ಶಿವಾನಂದಮೂರ್ತಿ ಭಾಗವಹಿಸಿದ್ದರು.

ರಂಗಭೂಮಿ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯು ಹೆಸರುವಾಸಿಯಾಗಿದ್ದು, ಇಲ್ಲಿನ ಕಲಾವಿದರು ನಿಷ್ಠೆಯಿಂದ ಕಲಿಕೆಯಲ್ಲಿ ತೊಡಗಿ ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದು ಲಯನ್ಸ್‌ನ ಸಾಂಸ್ಕೃತಿಕ ರಾಯಭಾರಿ ಬಿ.ಎಂ.ಅಪ್ಪಾಜಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT