×
ADVERTISEMENT
ಈ ಕ್ಷಣ :
ADVERTISEMENT

ಹೇಮಾವತಿ ನದಿ ಮೂಲ ಅಭಿವೃದ್ಧಿಗೆ ಆಗ್ರಹ

Published : 20 ಜನವರಿ 2022, 6:47 IST
ಫಾಲೋ ಮಾಡಿ
Comments

ಕೆ.ಆರ್.ಪೇಟೆ: ತಾಲ್ಲೂಕಿನ ಜನರಿಗೆ ಜೀವನದಿಯಾಗಿರುವ ಹೇಮಾವತಿ ನದಿಯ ಮೂಲ, ಮೂಡಿಗೆರೆ ತಾಲ್ಲೂ ಕಿನ ಜಾವಳಿ ಕ್ಷೇತ್ರವನ್ನು ಕೊಡಗಿನ ತಲಕಾವೇರಿಯಂತೆ ಯಾತ್ರಾ ಮತ್ತು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಹೇಮಾವತಿ ನದಿ ಉಗಮ ರಕ್ಷಣಾ ಒಕ್ಕೂಟದ ಮಂಡ್ಯ ಜಿಲ್ಲಾ ಸಂಚಾಲಕ ಬಸ್ ಕೃಷ್ಣೇಗೌಡ ಹೇಳಿದರು.

ಜಾವಳಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ನದಿ ಉಗಮ ರಕ್ಷಣಾ ಒಕ್ಕೂಟದ ಸಭೆಯಲ್ಲಿ ಮಾತನಾಡಿದರು.

ಹೇಮಾವತಿ ನದಿಯಿಂದ ಕೆ.ಆರ್.ಪೇಟೆ ಸೇರಿದಂತೆ ವಿವಿಧ ತಾಲ್ಲೂಕುಗಳು ಆರ್ಥಿಕವಾಗಿ ಸದೃಢವಾಗಿವೆ. ಆದರೆ ನದಿಯ ಉಗಮ ತಾಣ ಅಬಿವೃದ್ಧಿಯಾಗಿಲ್ಲ. ಇಲ್ಲೂ ತಲಕಾವೇರಿಯಂತೆ ತೀರ್ಥೋ ದ್ಬವ ಉತ್ಸವ ನಡೆಸಬೇಕು. ನಿಟ್ಟಿನಲ್ಲಿ ಸ್ಥಳೀಯರು ಮಾಡುವ ಎಲ್ಲ ಕಾರ್ಯ ಗಳಿಗೆ ಬೆಂಬಲ ನೀಡಲು ತಾಲ್ಲೂಕಿನ ಜನ ನಿಶ್ಚಯಿಸಿದ್ದೇವೆ ಎಂದರು.

ಹೇಮಾವತಿ ನದಿಯ ಬಗ್ಗೆ ಅಪಾರ ತಿಳಿವಳಿಕೆ ಇರುವ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಬೆಂಬಲ ನೀಡುವುದಾಗಿ, ಸ್ಥಳಕ್ಕೂ ಬರುವುದಾಗಿ ಅವರು ತಿಳಿಸಿದ್ದಾರೆ. ಅವರ ನೇತೃತ್ವದಲ್ಲಿ ಅಭಿವೃದ್ಧಿಯ ನೀಲಿನಕ್ಷೆ ತಯಾರಿಸಿ ಎಲ್ಲ ಜಿಲ್ಲೆಗಳ ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಆರು ಜಿಲ್ಲೆಗಳ ನಾಗರೀಕರನ್ನು ಒಳಗೊಂಡ ಹೇಮಾವತಿ ನದಿ ಉಗಮ ರಕ್ಷಣಾ ಒಕ್ಕೂಟ ರಚಿಸಲಾಗಿದೆ. ಇದರ ಮೂಲಕ ಮುಂದಿನ ದಿನಗಳಲ್ಲಿ ಆರು ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಲ್ಲಿ ಸಭೆ ನಡೆಸಿ ಜನಜಾಗೃತಿ ಸಭೆ ನಡೆಸಲಾಗುವುದು ಎಂದರು.

ಒಕ್ಕೂಟದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ಜಾವಳಿ ಗ್ರಾಮವು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯಲ್ಲಿದೆ. ನೀರಿನ ಹನಿಯಾಗಿ ಬೆಟ್ಟದ ಬುಡದಲ್ಲಿ ಕಾಣಿಸಿಕೊಳ್ಳುವ ಹೇಮಾವತಿ ನದಿ ಮುಂದೆ ಕಲ್ಯಾಣಗೆ ಹರಿದು, ಕೆರೆಯನ್ನು ತುಂಬಿ ತೊರೆಯಾಗಿ ನದಿಯಾಗಿ ಹರಿಯುತ್ತದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಹೇಮಾವತಿ ನದಿಯು ಕಾವೇರಿ ನದಿಯೊಂದಿಗೆ ಸೇರಿ ಜನರ ದಾಹ ತಣಿಸುತ್ತಿದೆ ಎಂದರು.

ಜನಜಾಗೃತಿ ಸಭೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಒಕ್ಕೂಟಕ್ಕೆ ಚಾಲನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರಗತಿಪರ ಕೃಷಿಕ ವಿಠಲಾಪುರ ಸುಬ್ಬೇಗೌಡ ಮಾತನಾಡಿ, ರಾಜಕೀಯ ಇಚ್ಚಾಶಕ್ತಿಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಈ ಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇದರ ಅಭಿವೃದ್ಧಿಗೆ ಒಂದಾಗಿ ಶ್ರಮಿಸುತ್ತೇವೆ ಎಂದರು.

ಪುರಸಭಾ ಸದಸ್ಯ ಸಂತೋಷ್, ಹೆತ್ತಗೊನಹಳ್ಳಿ ನಾರಾಯಣಗೌಡ, ಬಂಡಿಹೊಳೆ ಅಶೋಕ್ , ಅಗ್ರಹಾರಬಾಚಹಳ್ಳಿ ದೇವರಾಜು, ವಿ.ಜಗದೀಶ್, ಎಂ.ಎಸ್.ಅಶೋಕ್, ಜೆಸಿಐ ಅಧ್ಯಕ್ಷೆ ವಿದ್ಯಾರಾಜು, ಮಹಿಳಾ ಮಂಡಲಿ ಅಧ್ಯಕ್ಷೆ ಕಮಲಾಕ್ಷಿ, ಡಿ.ಆರ್.ವೆಂಕಟೇಶ್, ರಾಮದಾಸ್, ಎಂ.ಪಿ.ಲೋಕೇಶ್, ಬೊಪ್ಪನಹಳ್ಳಿ ಅಶೋಕ್, ಸಾಗರ್, ಗದ್ದೆ ಹೊಸೂರು ದರ್ಶನ್, ಅಕ್ಕಿಹೆಬ್ಬಾಳು ದಿವಾಕರ್, ಕಡೆಹೆಮ್ಮಿಗೆ ಧನಂಜಯ, ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ಹೊಸಹೊಳಲು ರಘು, ಬಿ.ಸಿ.ಎಸ್.ಕುಮಾರ್, ಧರ್ಮಪಾಲ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೆಕೆರೆ ಮಂಜುನಾಥ್, ಸಾಹಿತಿ ಮಂಜುನಾಥ್ ಇದ್ದರು.

ಕೆ.ಆರ್.ಪೇಟೆ: ತಾಲ್ಲೂಕಿನ ಜನರಿಗೆ ಜೀವನದಿಯಾಗಿರುವ ಹೇಮಾವತಿ ನದಿಯ ಮೂಲ, ಮೂಡಿಗೆರೆ ತಾಲ್ಲೂ ಕಿನ ಜಾವಳಿ ಕ್ಷೇತ್ರವನ್ನು ಕೊಡಗಿನ ತಲಕಾವೇರಿಯಂತೆ ಯಾತ್ರಾ ಮತ್ತು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಹೇಮಾವತಿ ನದಿ ಉಗಮ ರಕ್ಷಣಾ ಒಕ್ಕೂಟದ ಮಂಡ್ಯ ಜಿಲ್ಲಾ ಸಂಚಾಲಕ ಬಸ್ ಕೃಷ್ಣೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT