ಕೊಪ್ಪಳ: ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದ ಅನೇಕ ಕಷ್ಟ ಅನುಭವಿಸಿದ್ದ ತರಕಾರಿ ಮಾರಾಟ ಗಾರರು ಮತ್ತು ಗ್ರಾಹಕರು, ಈಚೆಗೆ ಕೆಲವು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ತರಕಾರಿಗಳ ಬೆಲೆ ಏರಿಕೆ ಆಗುತ್ತಿರುವುದು ಹೈರಾಣಾಗಿಸಿದೆ.

ಕೊಪ್ಪಳ ತಾಲ್ಲೂಕು, ಹುಬ್ಬಳ್ಳಿ, ಗದಗ, ಮುಂಡರಗಿ, ಹೊಸಪೇಟೆ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಸಂಚಾರ ಸಮಸ್ಯೆ ಸೇರಿದಂತೆ ತರಕಾರಿ ಕೊಯ್ಲು ಮತ್ತು ಮಾರಾಟಕ್ಕೆ ತೊಂದರೆಯಾಗಿದೆ. ಮಳೆಯಿಂದ ಅಳವಂಡಿ, ಹಿರೇಶಿಂದೋಗಿ ಭಾಗದಲ್ಲಿ ಒಣಬೇಸಾಯದ ಈರುಳ್ಳಿ, ಮೆಣಸಿನಕಾಯಿ ಉತ್ತಮ ಫಸಲು ಬರುತ್ತಿದ್ದರೂ ಬಿಟ್ಟು, ಬಿಟ್ಟು ಬರುತ್ತಿರುವ ಮಳೆಗೆ ಹೈರಾಣಾಗಿದ್ದಾರೆ. ನೀರಾವರಿ ರೈತರು ಹೆಚ್ಚಿನ ಮಳೆಯಾಗಲಿಕ್ಕಿಲ್ಲ ಎಂದು ನೀರು ಹಾಯಿಸಿದರೆ ಶನಿವಾರ, ಭಾನುವಾರ ಸುರಿದ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕೊಳೆತು ಹೋಗಿದೆ.

ಸುಮಾರು 100 ಹೆಕ್ಟೇರ್‌ನಷ್ಟು ಬೆಳೆ ಹಾಳಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದ್ದು, ಇನ್ನಷ್ಟೆ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಇದರಿಂದ ಟೊಮ್ಯಾಟೊ, ಗಜ್ಜರಿ, ಬೀನ್ಸ್, ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಗಡಿಬಿಡಿಯ ವಾತಾವರಣ ಇದ್ದರೂ ಗ್ರಾಹಕರು ಬೆಲೆ ಏರಿಕೆಯಿಂದ ಚಿಂತಿತರಾಗಿದ್ದಾರೆ. ಅವಶ್ಯಕ ತರಕಾರಿ ಮಾತ್ರ ಖರೀದಿಸಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ನವರಾತ್ರಿ, ದಸರಾ ಸೇರಿದಂತೆ ಸಾಲು, ಸಾಲು ಹಬ್ಬಗಳು ಬರುತ್ತಿದ್ದು, ಜನರು ತರಕಾರಿ ಖರೀದಿಸುವ ಪ್ರಮಾಣ ಕೂಡಾ ಹೆಚ್ಚಾಗಿದೆ. ಇದರಿಂದ ಮತ್ತಷ್ಟು ಬೆಲೆ ಏರಿಕೆಯಾಗುವ ಲಕ್ಷಣ ಕಂಡು ಬರುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ಆವಕವಾಗುತ್ತಿದ್ದ ಬದನೆಕಾಯಿ, ಈರುಳ್ಳಿ, ಕೊತ್ತಂಬರಿ ಸೇರಿದಂತೆ ಇತರೆ ಸೊಪ್ಪು ಕಡಿಮೆಯಾಗಿದೆ. ಮಳೆ ಇನ್ನೂ ಹೆಚ್ಚಾದರೆ ಕೊಳೆಯುವ ಸ್ಥಿತಿಯಲ್ಲಿ ಇವೆ.

ನಗರದ ಎಪಿಎಂಸಿ ಮಾರುಕಟ್ಟೆ, ಜೆಪಿ ತರಕಾರಿ ಮಾರುಕಟ್ಟೆ, ಹೊರವಲಯದ ಬೆಳವಿನಾಳ, ತಾಲ್ಲೂಕು ಪಂಚಾಯಿತಿ ಕಚೇರಿ ಎದುರಿನ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ವಿವಿ ರಸ್ತೆಯ ಬದಿಗಳಲ್ಲಿ ವ್ಯಾಪಾರಿಗಳು, ತಳ್ಳುಗಾಡಿಯವರು ವಿವಿಧ ಬಡಾವಣೆ ಗಳಿಗೆ ತೆರಳಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವು ಕಡೆ ರೈತರು ನೇರವಾಗಿ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದರೂ ಅವರ ಪ್ರಮಾಣ ಕಡಿಮೆ. ಗ್ರಾಹಕರು ಚೌಕಾಶಿ ನಡೆಸುತ್ತಿರುವ ದೃಶ್ಯ ಕಂಡು ಬಂದವು.

ಕೊಪ್ಪಳ ಮಾರುಕಟ್ಟೆಯ ತರಕಾರಿ ದರ

ತರಕಾರಿ; ಇಂದಿನ ಬೆಲೆ; ಹಿಂದಿನ ಬೆಲೆ

ಟೊಮೆಟೊ; 30;40

ಈರುಳ್ಳಿ;25;30

ಮೆಣಸಿನಕಾಯಿ;15;15

ಆಲೂಗಡ್ಡೆ;20;25

ಎಲೆಕೋಸು;15;20

ಬೆಳ್ಳುಳ್ಳಿ;80;120

ಗಜ್ಜರಿ;60;70

ಬೀನ್ಸ್;60;60

ಬದನೆಕಾಯಿ;20;30

ಬೆಂಡೆಕಾಯಿ;40;45

ಹಿರೇಕಾಯಿ;30;40

ನುಗ್ಗೆಕಾಯಿ;90;100

ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದ ಅನೇಕ ಕಷ್ಟ ಅನುಭವಿಸಿದ್ದ ತರಕಾರಿ ಮಾರಾಟ ಗಾರರು ಮತ್ತು ಗ್ರಾಹಕರು, ಈಚೆಗೆ ಕೆಲವು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ತರಕಾರಿಗಳ ಬೆಲೆ ಏರಿಕೆ ಆಗುತ್ತಿರುವುದು ಹೈರಾಣಾಗಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.