ಹಾನಗಲ್: ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ನೇತೃತ್ವದಲ್ಲಿ ಪಕ್ಷದ ಯುವ ಪಡೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆಮನೆ ಭೇಟಿ ಮೂಲಕ ಮತಯಾಚನೆಯಲ್ಲಿ ತೊಡಗಿದೆ.

ಭಾನುವಾರ ನರೇಗಲ್ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಿಯಾಜ್ ಶೇಖ್ ಮತಯಾಚನೆ ನಡೆಸಿದರು. ಕೂಡಲ ಗ್ರಾಮದ ಗುರುನಂಜೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಆರಂಭಿಸಲಾಯಿತು. ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಜೆಡಿಎಸ್ ರೂಪುಗೊಂಡಿದೆ. ಮತದಾರರ ಸ್ಪಂದನೆ ಉತ್ತಮವಾಗಿದೆ ಎಂದು ನಿಯಾಜ್ ಶೇಖ್ ಹೇಳಿದರು.

ಜೆಡಿಎಸ್ ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಸುಗ್ಗಮ್ಮನವರ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಕಲಾಲ, ನಗರ ಘಟಕದ ಅಧ್ಯಕ್ಷ ಸರ್ವರ್ ಸರ್ವಿಕೇರಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಿರಣ ಗುಡ್ಡಣ್ಣನವರ, ಉಮರ್ಷ ಚಲ್ಯಾಳ, ಮೆಹಬೂಬ್‌ಭಾಷಾ ತಂಡೂರ, ಹನುಮಂತಪ್ಪ ಬಾಗಣ್ಣನವರ, ರಾಜು
ಬಳ್ಳಾರಿ, ಬಸವರಾಜ ಮಾಳಪ್ಪನವರ ಇದ್ದರು.

ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ನೇತೃತ್ವದಲ್ಲಿ ಪಕ್ಷದ ಯುವ ಪಡೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆಮನೆ ಭೇಟಿ ಮೂಲಕ ಮತಯಾಚನೆಯಲ್ಲಿ ತೊಡಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.