×
ADVERTISEMENT
ಈ ಕ್ಷಣ :
ADVERTISEMENT

ಟಾಟಾಕೂಟಿ ಪರ್ವತ ಏರಿದ ಕನ್ನಡಿಗ ಧನರಾಜ್

Published : 17 ಅಕ್ಟೋಬರ್ 2021, 18:32 IST
ಫಾಲೋ ಮಾಡಿ
Comments

ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನ 15,568 ಅಡಿ ಎತ್ತರದ ಟಾಟಾಕೂಟಿ ಪರ್ವತವನ್ನು ತಾಲ್ಲೂಕಿನ ಅನ್ನೆಹಾಳ್ ಗ್ರಾಮ ಭೋವಿ ಕಾಲೊನಿಯ ಧನರಾಜ್  ಯಶಸ್ವಿಯಾಗಿ ಏರಿದ್ದಾರೆ. ಪರ್ವತಾರೋಹಣ ಮುಗಿಸಿ ಗ್ರಾಮಕ್ಕೆ ಮರಳಿದ್ದಾರೆ.

ಯುವ ಸಬಲೀಕರಣ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಈಚೆಗೆ ಪರ್ವತಾರೋಹಣ ಸಾಹಸ ಕಾರ್ಯಕ್ಕೆ 38 ಜನರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಧನರಾಜ್‌ ಕೂಡ ಒಬ್ಬರು. ಜಮ್ಮು ಮತ್ತು ಕಾಶ್ಮೀರದ ಜವಾಹರ್ ಇನ್‌ಸ್ಟಿಟ್ಯೂಟ್ ಆಫ್‌ ಮೌಂಟೆನೆರಿಂಗ್ ಅಂಡ್ ವಿಂಟರ್ ಸ್ಪೋರ್ಟ್ಸ್‌ನಲ್ಲಿ 10 ದಿನ ತರಬೇತಿ  ಪಡೆದಿದ್ದರು.

ಯುವ ಸಾಹಸಿ 23 ಗಂಟೆಯೊಳಗೆ ಪರ್ವತ ಹತ್ತಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸೋನಾ ಮಾರ್ಗ್ ಪರ್ವತ ಏರುವುದಕ್ಕೆ ಕೂಡ ಧನರಾಜ್ ಆಯ್ಕೆಯಾಗಿದ್ದರು. ಆಗ 13,500 ಅಡಿ ಶಿಖರ ಏರಿದ್ದರು. ಸೈನ್ಯಕ್ಕೆ ಸೇರುವ ಗುರಿ
ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ವಾರ್ತೆ ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನ 15,568 ಅಡಿ ಎತ್ತರದ ಟಾಟಾಕೂಟಿ ಪರ್ವತವನ್ನು ತಾಲ್ಲೂಕಿನ ಅನ್ನೆಹಾಳ್ ಗ್ರಾಮ ಭೋವಿ ಕಾಲೊನಿಯ ಧನರಾಜ್  ಯಶಸ್ವಿಯಾಗಿ ಏರಿದ್ದಾರೆ. ಪರ್ವತಾರೋಹಣ ಮುಗಿಸಿ ಗ್ರಾಮಕ್ಕೆ ಮರಳಿದ್ದಾರೆ. ಯುವ ಸಬಲೀಕರಣ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಈಚೆಗೆ ಪರ್ವತಾರೋಹಣ ಸಾಹಸ ಕಾರ್ಯಕ್ಕೆ 38 ಜನರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಧನರಾಜ್‌ ಕೂಡ ಒಬ್ಬರು. ಜಮ್ಮು ಮತ್ತು ಕಾಶ್ಮೀರದ ಜವಾಹರ್ ಇನ್‌ಸ್ಟಿಟ್ಯೂಟ್ ಆಫ್‌ ಮೌಂಟೆನೆರಿಂಗ್ ಅಂಡ್ ವಿಂಟರ್ ಸ್ಪೋರ್ಟ್ಸ್‌ನಲ್ಲಿ 10 ದಿನ ತರಬೇತಿ  ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT