ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರಾಗಿ ವರಸಿದ್ಧಿ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಉಮಾದೇವಿಕೃಷ್ಣ ಶುಕ್ರವಾರ ಆಯ್ಕೆಯಾದರು. ನಗರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಎ’ ಹಾಗೂ ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಬಿ’ ಮೀಸಲಾತಿ ಇದೆ.

ಅಧ್ಯಕ್ಷ ಸ್ಥಾನಕ್ಕೆ 26ನೇ ವಾರ್ಡ್‌ನ ವರಸಿದ್ಧಿ ವೇಣುಗೋಪಾಲ್ ಹಾಗೂ ಕಾಂಗ್ರೆಸ್‌ನಿಂದ12ನೇ ವಾರ್ಡ್‌ನ ಸೈಯ್ಯದ್ ಜಾವಿದ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 11ನೇ ವಾರ್ಡ್‌ನ ಉಮಾದೇವಿ ಕೃಷ್ಣ ಹಾಗೂ ಕಾಂಗ್ರೆಸ್‌ನ ಕೆ.ಆರ್.ಮಂಜುಳಾ ಸ್ಪರ್ಧಿಸಿದ್ದರು.

ವರಸಿದ್ಧಿ ವೇಣುಗೋಪಾಲ್ ಮತ್ತು ಉಮಾದೇವಿ ಅವರು ತಲಾ 23 ಮತಗಳನ್ನು ಪಡೆದು ಆಯ್ಕೆಯಾದರು. ಸೈಯದ್ ಜಾವಿದ್ ಮತ್ತು ಮಂಜುಳಾ ಅವರು 13 ಮತಗಳನ್ನು ಪಡೆದು ಸೋತರು.

ವರಸಿದ್ಧಿ ಅವರು ಚಿಕ್ಕಮಗಳೂರು ನಗರಸಭೆಯ77ನೇ ಅಧ್ಯಕ್ಷ ಹಾಗೂ ಉಮಾದೇವಿ ಅವರು 46ನೇ ಉಪಾಧ್ಯಕ್ಷರಾಗಿದ್ದಾರೆ.
ನಗರಸಭೆ 35 ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯ ಸಹಿತ ಒಟ್ಟು ಮತದಾರರು 38, ಈ ಪೈಕಿ 36 ಮತದಾರರು ಹಾಜರಿದ್ದರು. 20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ತಬಸ್ಸುಮ್ ಬಾನು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಗೈರು ಹಾಜರಾಗಿದ್ದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಬಿಜೆಪಿಯವರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಜೆಡಿಎಸ್‌ನವರು.
ನಗರಸಭೆ 35 ಸದಸ್ಯರು ಇದ್ದಾರೆ. ಬಿಜೆಪಿ– 18, ಕಾಂಗ್ರೆಸ್– 12, ಜೆಡಿಎಸ್– 2, ಪಕ್ಷೇತರ – (ಎಸ್‌ಡಿಪಿಐ1 ಸೇರಿದಂತೆ) 3 ಸದಸ್ಯ ಬಲ ಹೊಂದಿದೆ. ಜೆಡಿಎಸ್‌ನ ಇಬ್ಬರು, ಪಕ್ಷೇತರ ಒಬ್ಬರು ಸದಸ್ಯರ ಬೆಂಬಲ:ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನ ಇಬ್ಬರು ಸದಸ್ಯರು, ಪಕ್ಷೇತರ ಒಬ್ಬರು ಸದಸ್ಯರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಬಿಜೆಪಿ ಮೂರನೇ ಬಾರಿಗೆ
ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ. ‘ಪಕ್ಷದ ನಾಯಕರ ಅಣತಿಯಂತೆ ನಡೆದು ಕೊಂಡಿದ್ದೇವೆ. ವಾರ್ಡ್ ಅಭಿವೃದ್ಧಿ ದೃಷ್ಟಿಕೋನ
ದಿಂದ ಬೆಂಬಲಿಸಿದ್ದೇವೆ’ ಎಂದು ಜೆಡಿಎಸ್ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಗರಸಭೆ ಅಧ್ಯಕ್ಷರಾಗಿ ವರಸಿದ್ಧಿ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಉಮಾದೇವಿಕೃಷ್ಣ ಶುಕ್ರವಾರ ಆಯ್ಕೆಯಾದರು. ನಗರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಎ’ ಹಾಗೂ ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಬಿ’ ಮೀಸಲಾತಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.