ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಆರ್ಕುಂದ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯ ಪರಿಣಾಮ ಹೆಂಚಿನ ಮನೆಯೊಂದು ನೆಲಸಮವಾಗಿದೆ. ಅದರಲ್ಲಿದ್ದ ಸುಮಾರು 5ಕ್ಕೂ ಹೆಚ್ಚು ಮೇಕೆಗಳು ಹೆಂಚಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿವೆ.

ಗ್ರಾಮದ ಅಶ್ವತ್ಥಪ್ಪ ಮತ್ತು ಅನ್ನಪೂರ್ಣಮ್ಮ ಅವರಿಗೆ ಸೇರಿದ ಹೆಂಚಿನ ಮನೆಯ ಒಂದು ಭಾಗದಲ್ಲಿ ಇವರು ವಾಸವಿದ್ದು, ಮತ್ತೊಂದು ಭಾಗದಲ್ಲಿ ಸುಮಾರು 30ಕ್ಕೂ ಹೆಚ್ಚು ಮೇಕೆಗಳನ್ನು ಸಾಕಿಕೊಂಡಿದ್ದರು. ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಂಚಿನ ಮನೆಯು ಗುರುವಾರ ಏಕಾಏಕಿ ಬಿದ್ದು ನೆಲಸಮವಾಗಿದೆ. ಇದರಲ್ಲಿದ್ದ ಅಶ್ವತ್ಥಪ್ಪ ಮತ್ತು ಅನ್ನಪೂರ್ಣಮ್ಮ ತಮ್ಮ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಉಳಿದ ಮೇಕೆಗಳ ಜೀವವನ್ನು ಕಾಪಾಡಿದ್ದರೂ ಕೂಡ ಕೆಲವು ಹೆಂಚಿನ ಅಡಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿವೆ.

ಅನ್ನಪೂರ್ಣಮ್ಮ ಮಾತನಾಡಿ, ಬಡತನದ ನಡುವೆ ಜೀವನೋಪಾಯಕ್ಕಾಗಿ ಮೇಕೆಗಳನ್ನು ಸಾಕುತ್ತಿದ್ದೇವೆ. ಇತ್ತೀಚೆಗೆ ನಾಯಿಗಳ ದಾಳಿಯಿಂದಾಗಿ 5 ಮೇಕೆಗಳನ್ನು ಕಳೆದುಕೊಂಡಿದ್ದೇವೆ. ಇದೀಗ ಮಳೆಯ ಪರಿಣಾಮವಾಗಿ ಮತ್ತೆ ಮೇಕೆಗಳ ಸಾವನ್ನು ಕಾಣುವಂತಾಗಿದೆ. ಸಾಲ ಮಾಡಿ ಮೇಕೆಗಳನ್ನು ತಂದು ಸಾಕಾಣಿಕೆ ಮಾಡುವ ಮೂಲಕ ಬದುಕು ಸಾಗಿಸುತ್ತಿದ್ದೇವೆ. ಸರ್ಕಾರ ನಮ್ಮ ಸಂಕಷ್ಟವನ್ನು ಅರಿತು ನೋವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.