×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಕನಸಾಗಿಯೇ ಉಳಿದ ನಂದಿ ಪ್ರಾಧಿಕಾರ

2018ರಲ್ಲಿಯೇ ಜನಪ್ರತಿನಿಧಿಗಳಿಂದ ಅಭಿವೃದ್ಧಿ ಪ್ರಾಧಿಕಾರ ರಚನೆಯ ಭರವಸೆ
Published : 10 ಅಕ್ಟೋಬರ್ 2021, 5:01 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರವಾಸಿತಾಣಗಳು ಹಾಗೂ ನಂದಿಗಿರಿಧಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ನಂದಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಆಗಬೇಕು ಎನ್ನುವುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಈ ಕನಸು ಇಂದಿಗೂ ನನಸಾಗಿಲ್ಲ. ಈಗ ಸಮಿತಿ ರಚನೆಯ ಮೂಲಕ ‍ಪ್ರಾಧಿಕಾರದ ಆಸೆ ಮತ್ತು ಕನಸಿಗೆ ಎಳ್ಳು ನೀರು ಬಿಡಲಾಗಿದೆ.

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಧಿಕಾರ ರಚನೆಯಾದರೆ ಅಲ್ಲಿ ಅಭಿವೃದ್ಧಿಗೆ ವೇಗ ದೊರೆಯುತ್ತದೆ, ಸಮಸ್ಯೆಗಳ ಪರಿಹಾರ ಇತ್ಯಾದಿ ವಿಚಾರಗಳ ಬಗ್ಗೆ ಪ್ರಾಧಿಕಾರ ತೀರ್ಮಾನಕೈಗೊಳ್ಳುತ್ತವೆ.

2018ರಲ್ಲಿ ಸಚಿವರಾಗಿದ್ದ ಎನ್‌ಎಚ್.ಶಿವಶಂಕರರೆಡ್ಡಿ ಅವರು ಸಹ ಸರ್.ಎಂ.ವಿಶ್ವೇಶ್ವರಯ್ಯ ಅವರ ಸಮಾಧಿ, ನಂದಿ ಬೆಟ್ಟ ಅಭಿವೃದ್ಧಿ ದೃಷ್ಟಿಯಲ್ಲಿ ಇಟ್ಟುಕೊಂಡು ‌‌‌‘ನಂದಿ ಅಭಿವೃದ್ಧಿ ಪ್ರಾಧಿಕಾರ’ ರಚಿಸಬೇಕು ಎನ್ನುವ ಮಾತುಗಳನ್ನಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದಿದ್ದರು. ಅಂದಿನಿಂದ ಇಂದಿನವರೆಗೂ ಪ್ರಾಧಿಕಾರ ರಚನೆಯ ಸೊಲ್ಲೇ ಇಲ್ಲದಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಧಿಕಾರಗಳು ಸಹ ರಚನೆ ಆಗಿವೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ದೃಷ್ಟಿಯಿಂದ ನಂದಿಯನ್ನು ಪ್ರಧಾನವಾಗಿ ಇಟ್ಟುಕೊಂಡು ಅದಕ್ಕೆ ಹೊಂದಿಕೊಂಡಿರುವ ತಾಣಗಳ ಅಭಿವೃದ್ಧಿಗೆ ಪ‍್ರಾಧಿಕಾರ ರಚನೆ ಆಗಬೇಕು ಎನ್ನುವ ಆಸೆ ಜಿಲ್ಲೆಯ ಜನರದ್ದಾಗಿದೆ.

ಸಮಿತಿ ರಚನೆ: ’ಈಗ ನಂದಿ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಂದಿ ಬೆಟ್ಟದ ಅಭಿವೃದ್ಧಿಗೆ ಸಮಿತಿ ರಚಿಸಿದ್ದಾರೆ. ಈಗಾಗಲೇ ಒಂದು ಸಭೆ ಸಹ ನಡೆದಿದೆ. ಆ ನಂತರ ನಂದಿಯಲ್ಲಿ ದಿಬ್ಬ ಕುಸಿದ ಕಾರಣ ಮತ್ತೆ ಸಭೆಗಳು ನಡೆದಿಲ್ಲ. ಆ ಸಭೆಯನ್ನು ನಂದಿಯಲ್ಲಿ ಮಾಡಬೇಕು ಎಂದುಕೊಂಡಿದ್ದರು. ಆದರೆ ದಿಬ್ಬ ಕುಸಿದು ಪ್ರವೇಶ ಬಂದ್ ಆದ ಕಾರಣ ಬೆಂಗಳೂರಿನಲ್ಲಿಯೇ ಸಭೆ ನಡೆಯಿತು ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸುತ್ತವೆ.

ಪ್ರಾಧಿಕಾರ ರಚನೆ ಮತ್ತು ನಂದಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೋಟಿ ಕೋಟಿ ಲೆಕ್ಕದ ಮಾತುಗಳನ್ನು ಜನಪ್ರತಿನಿಧಿಗಳು ಹೇಳಿದ್ದಾರೆ. ಅದು ನಮಗೆ ತಿಳಿದಿಲ್ಲ. ಇವು ಬರಿ ಮಾತಷ್ಟೇ ಎಂದು ಇಲಾಖೆ ಅಧಿಕಾರಿಗಳು ನುಡಿಯುವರು.

2010ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನಂದಿಬೆಟ್ಟವನ್ನು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದಾಗಿ ಘೋಷಿಸಿದ್ದರು. 2016ರ ಅಕ್ಟೋಬರ್‌ನಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಟ್ಟದ ಮೇಲಿರುವ ನೆಹರೂ ನಿಲಯದಲ್ಲಿ ಸಭೆ ನಡೆಸಿ, ‘ನಂದಿ ಗಿರಿಧಾಮ ಮತ್ತದರ ಸುತ್ತಲಿನ ಬೆಟ್ಟಗಳನ್ನು ₹50 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ಸಮಗ್ರ ನೀಲನಕ್ಷೆ’ (ಮಾಸ್ಟರ್ ಪ್ಲ್ಯಾನ್) ರೂಪಿಸಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದ್ದರು. ಇದೆಲ್ಲವೂ ಪ್ರಚಾರ ಪಡೆಯಿತೇ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿತಾಣಗಳು ಹಾಗೂ ನಂದಿಗಿರಿಧಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ನಂದಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಆಗಬೇಕು ಎನ್ನುವುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಈ ಕನಸು ಇಂದಿಗೂ ನನಸಾಗಿಲ್ಲ. ಈಗ ಸಮಿತಿ ರಚನೆಯ ಮೂಲಕ ‍ಪ್ರಾಧಿಕಾರದ ಆಸೆ ಮತ್ತು ಕನಸಿಗೆ ಎಳ್ಳು ನೀರು ಬಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT