ಬಾಗೇಪಲ್ಲಿ: ಪಟ್ಟಣದ ವ್ಯಾಪ್ತಿಯಲ್ಲಿನ ನಿವೇಶನದಾರರಲ್ಲಿ ಎಲ್ಲಾ ದಾಖಲೆಗಳು ಇದ್ದರೆ ಶಾಖೆಯ ಅಧಿಕಾರಿಗಳು ಎನ್‌ಒಸಿ, ಪಿಐಡಿ ಸಂಖ್ಯೆ ನೀಡುತ್ತಿಲ್ಲ. ಖಾತೆಗಳ ರದ್ದು, ಯರ್ರ ಕಾಲುವೆ ಒತ್ತುವರಿ ಹಾಗೂ ಉದ್ಯಾನಗಳನ್ನು ಸರ್ವೆ ಮಾಡಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ಪುರಸಭೆ ಆವರಣದಲ್ಲಿ ಬುಧವಾರ ಪುರಸಭೆ ಪ್ರಭಾರ ಅಧ್ಯಕ್ಷ ಎ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.