ಬೆಂಗಳೂರು: ‘ಆನ್ಲೈನ್’ ಅರೆಕಾಲಿಕ ಕೆಲಸದ (ಪಾರ್ಟ್ ಟೈಂ ಜಾಬ್) ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹ 19.67 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಡಿವಾಳ ಮಾರುತಿನಗರದ 33 ವರ್ಷದ ಮಹಿಳೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಗೃಹಿಣಿಯಾದ ಮಹಿಳೆ, ಮನೆಯಿಂದಲೇ ಅರೆಕಾಲಿಕ ಕೆಲಸ ಮಾಡಿ ಹಣ ಸಂಪಾದಿಸಲು ಮುಂದಾಗಿದ್ದರು. ಇದಕ್ಕಾಗಿ ಆನ್ಲೈನ್ನಲ್ಲಿ ಹುಡುಕಾಡಿದ್ದರು. ಜಾಲತಾಣವೊಂದರ ಮೂಲಕ ಆರೋಪಿಗಳ ಪರಿಚಯವಾಗಿತ್ತು.’

‘ಉತ್ಪನ್ನಗಳ ಮಾರಾಟದಿಂದ ಕೈ ತುಂಬ ಕಮಿಷನ್ ಪಡೆಯಬಹುದೆಂದು ಹೇಳಿದ್ದ ಆರೋಪಿಗಳು, ಅರ್ಜಿ ನಮೂನೆ ಭರ್ತಿ ಮಾಡುವಂತೆ ಲಿಂಕ್ ಕಳುಹಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಮಹಿಳೆ, ಲಿಂಕ್ ತೆರೆದು ವೈಯಕ್ತಿಕ ಮಾಹಿತಿ ಭರ್ತಿ ಮಾಡಿದ್ದರು’ ಎಂದೂ ತಿಳಿಸಿದರು.

‘ನೋಂದಣಿ ಹಾಗೂ ಇತರೆ ಶುಲ್ಕ ಪಾವತಿಸುವಂತೆ ಹೇಳಿದ್ದ ಆರೋಪಿಗಳು, ಮಹಿಳೆಯಿಂದ ಹಂತ ಹಂತವಾಗಿ ₹ 19.67 ಲಕ್ಷ ಪಡೆದಿದ್ದರು. ಇದಾದ ನಂತರ ಆರೋಪಿಗಳು ಯಾವುದೇ ಕೆಲಸ ನೀಡಿಲ್ಲ. ಸಂಪರ್ಕಕ್ಕೂ ಸಿಕ್ಕಿಲ್ಲ’ ಎಂದೂ ಹೇಳಿದರು.

‘ಆನ್ಲೈನ್’ ಅರೆಕಾಲಿಕ ಕೆಲಸದ (ಪಾರ್ಟ್ ಟೈಂ ಜಾಬ್) ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹ 19.67 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.