×
ADVERTISEMENT
ಈ ಕ್ಷಣ :
ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ | ಬರಿದಾದ ಬೊಕ್ಕಸ; ಅಭಿವೃದ್ಧಿ ಚಟುವಟಿಕೆಗೆ ಗರ

3 ತಿಂಗಳಲ್ಲಿ ₹6 ಕೋಟಿ ಸಂಗ್ರಹ
ಫಾಲೋ ಮಾಡಿ
Comments
ADVERTISEMENT
""

ಬೆಂಗಳೂರು: ಕೋವಿಡ್‌ ಪ್ರಕರಣ ಕಡಿಮೆಯಾದ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜೀವಕಳೆ ಬಂದಿದೆ. ಪ್ರಾಣಿ ಪ್ರಿಯರು ಉದ್ಯಾನದತ್ತ ಮುಖಮಾಡುತ್ತಿದ್ದಾರೆ. ಹೀಗಿದ್ದರೂ ಕೋವಿಡ್‌ ಪೂರ್ವದಲ್ಲಿದ್ದಷ್ಟು ಆದಾಯ ಸಂಗ್ರಹವಾಗುತ್ತಿಲ್ಲ. ಇದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯುಂಟಾಗಿದೆ.

ಈ ವರ್ಷದ ಜುಲೈ 1ರಂದು ರಾಜ್ಯ ಸರ್ಕಾರ ಮೃಗಾಲಯಗಳ ಪುನರಾರಂಭಕ್ಕೆ ಅನುಮತಿ ನೀಡಿತ್ತು. ಅಂದಿನಿಂದ ಸೆಪ್ಟೆಂಬರ್‌ ಅಂತ್ಯದವರೆಗೂ ₹2.37 ಲಕ್ಷ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ₹6.05 ಕೋಟಿ ಸಂಗ್ರಹವಾಗಿದೆ.

‘ಲಾಕ್‌ಡೌನ್‌ ತೆರವಾದ ನಂತರ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಉದ್ಯಾನಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜುಲೈನಲ್ಲಿ ₹1.33 ಕೋಟಿಯಷ್ಟೇ ಸಂಗ್ರಹವಾಗಿತ್ತು. ಹೀಗಾಗಿ ಪ್ರಾಣಿಗಳ ಆಹಾರ, ಸಿಬ್ಬಂದಿ ವೇತನಕ್ಕಾಗಿ ನಾವೇ ₹ 70 ಲಕ್ಷ ನೀಡಬೇಕಾಯಿತು. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಿಸಿದೆ.ಆದರೆ ಆದಾಯ ಇಲ್ಲ. ಹೀಗಾಗಿ ಅಭಿವೃದ್ಧಿ ಚಟುವಟಿಕೆಗಳಿಗೂ ಮಂಕು ಬಡಿದಿದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿ‍‍ಪಿನ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರಲ್ಲಿ ಈಗಲೂ ಭಯ ಇರುವಂತೆ ಕಾಣುತ್ತಿದೆ. ಹೀಗಾಗಿ ಸಾಮಾನ್ಯ ದಿನಗಳಲ್ಲಿದ್ದಷ್ಟು ಪ್ರವಾಸಿಗರು ಕಾಣುತ್ತಿಲ್ಲ. ಕೋವಿಡ್‌ ಪೂರ್ವದಲ್ಲಿ ಸಾಕಷ್ಟು ಆದಾಯವಿದ್ದು, ಒಂದಷ್ಟು ಮೊತ್ತವನ್ನು ಅಭಿವೃದ್ಧಿಗೆ ತೆಗೆದಿಡುತ್ತಿದ್ದೆವು. ಹಾಗೆ ತೆಗೆದಿಟ್ಟಿದ್ದ ಹಣವನ್ನು ಕೋವಿಡ್‌ ಸಮಯದಲ್ಲಿ ವ್ಯಯಿಸಲಾಗಿದೆ. ಹೀಗಾಗಿ ಬೊಕ್ಕಸ ಪೂರ್ಣವಾಗಿ ಬರಿದಾಗಿದೆ. ಮತ್ತೊಮ್ಮೆ ಲಾಕ್‌ಡೌನ್‌ ಹೇರಿದ್ದರೆ ಪ್ರಾಣಿಗಳ ಆಹಾರಕ್ಕಾಗಿ ಹಣ ಹೊಂದಿಸುವುದಕ್ಕೂ ಕಷ್ಟಪಡಬೇಕಾಗುತ್ತಿತ್ತು. ಅದೃಷ್ಟವಶಾತ್‌ ಹಾಗಾಗಲಿಲ್ಲ’ ಎಂದರು. 

‘ಕೋವಿಡ್‌ ಪೂರ್ವದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೆವು. ಹಣದ ಅಭಾವದಿಂದಾಗಿ ಯೋಜನೆಗಳನ್ನೆಲ್ಲಾ ತಾತ್ಕಾಲಿಕವಾಗಿ ಕೈಬಿಡುವುದು ಅನಿವಾರ್ಯವಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವತ್ತ ಚಿತ್ತ ಹರಿಸಿದ್ದೇವೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಉದ್ಯಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲೂ ಒತ್ತು ನೀಡುತ್ತಿದ್ದೇವೆ. ಚಿರತೆ ಸಫಾರಿ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಅದನ್ನು ಶೀಘ್ರವೇ ಪ್ರವಾಸಿಗರಿಗೆ ಮುಕ್ತಗೊಳಿಸಲಿದ್ದೇವೆ. ದುಂದು ವೆಚ್ಚಗಳಿಗೂ ಕಡಿವಾಣ ಹಾಕಲಾಗುತ್ತಿದೆ’ ಎಂದು ಹೇಳಿದರು.

ಕೋವಿಡ್‌ ಪ್ರಕರಣ ಕಡಿಮೆಯಾದ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜೀವಕಳೆ ಬಂದಿದೆ. ಪ್ರಾಣಿ ಪ್ರಿಯರು ಉದ್ಯಾನದತ್ತ ಮುಖಮಾಡುತ್ತಿದ್ದಾರೆ. ಹೀಗಿದ್ದರೂ ಕೋವಿಡ್‌ ಪೂರ್ವದಲ್ಲಿದ್ದಷ್ಟು ಆದಾಯ ಸಂಗ್ರಹವಾಗುತ್ತಿಲ್ಲ. ಇದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯುಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT