×
ADVERTISEMENT
ಈ ಕ್ಷಣ :
ADVERTISEMENT

ಅಲಯನ್ಸ್ ಏರ್‌ ನಗದೀಕರಣಕ್ಕೆ ಕೇಂದ್ರ ಸಿದ್ಧತೆ

Published : 10 ಅಕ್ಟೋಬರ್ 2021, 16:42 IST
ಫಾಲೋ ಮಾಡಿ
Comments

ನವದೆಹಲಿ: ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ ನಂತರ, ಕೇಂದ್ರ ಸರ್ಕಾರವು ಈಗ ಅಲಯನ್ಸ್ ಏರ್‌ ಸೇರಿದಂತೆ ಏರ್‌ ಇಂಡಿಯಾದ ನಾಲ್ಕು ಅಂಗಸಂಸ್ಥೆಗಳನ್ನು ನಗದೀಕರಿಸಿಕೊಳ್ಳಲು ಕೆಲಸ ಶುರು ಮಾಡಲಿದೆ.

ಅಲ್ಲದೆ, ₹ 14,700 ಕೋಟಿಗಿಂತ ಹೆಚ್ಚಿನ ಮೌಲ್ಯದ ಜಮೀನು ಮತ್ತು ಕಟ್ಟಡಗಳ ನಗದೀಕರಣವನ್ನೂ ಆರಂಭಿಸಲಾಗುವುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.

ಏರ್‌ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್‌ಅನ್ನು (ಎಐಎಎಚ್‌ಎಲ್‌) ನಗದೀಕರಿಸಲು ಯೋಜನೆ ಸಿದ್ಧವಾಗಲಿದೆ. ಅಲಯನ್ಸ್ ಏರ್ ಕಂಪನಿಯನ್ನೂ ನಗದೀಕರಿಸಲಾಗುವುದು ಎಂದು ಪಾಂಡೆ ಅವರು ಹೇಳಿದ್ದಾರೆ. ಎಐಎಎಚ್‌ಎಲ್‌ ಅಡಿಯಲ್ಲಿ ಎರಡು ಕಂಪನಿಗಳು ಇವೆ. ಏರ್‌ ಇಂಡಿಯಾ ಕಂಪನಿಯ ಮಾರಾಟ ಆದ ಹೊರತು ಇತರ ಕಂಪನಿಗಳ ಆಸ್ತಿ ನಗದೀಕರಣ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ ನಂತರ, ಕೇಂದ್ರ ಸರ್ಕಾರವು ಈಗ ಅಲಯನ್ಸ್ ಏರ್‌ ಸೇರಿದಂತೆ ಏರ್‌ ಇಂಡಿಯಾದ ನಾಲ್ಕು ಅಂಗಸಂಸ್ಥೆಗಳನ್ನು ನಗದೀಕರಿಸಿಕೊಳ್ಳಲು ಕೆಲಸ ಶುರು ಮಾಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT