×
ADVERTISEMENT
ಈ ಕ್ಷಣ :
ADVERTISEMENT

Marburg Virus Outbreak: ಆಫ್ರಿಕಾದಲ್ಲಿ ಎಬೋಲಾ ಮಾದರಿಯ ಮಾರಕ ಮಾರ್ಬರ್ಗ್ ವೈರಸ್ ಆರ್ಭಟ: ಕನಿಷ್ಠ 9 ಸಾವು

Marburg Virus Outbreak: ಆಫ್ರಿಕಾದ ಈಕ್ವಟೋರಿಯಲ್ ಗಿನಿ ದೇಶದಲ್ಲಿ ಎಬೋಲಾದಷ್ಟೇ ಅಪಾಯಕಾರಿಯಾಗಿರುವ ಮತ್ತೊಂದು ವೈರಸ್ ಸಾಂಕ್ರಾಮಿಕ ಜನರಲ್ಲಿ ಆತಂಕ ಮೂಡಿಸಿದೆ. ರಕ್ತಸ್ರಾವ ಜ್ವರಕ್ಕೆ ಕಾರಣವಾಗುವ ಮಾರ್ಬರ್ಗ್ ವೈರಸ್, ಮಾರ್ಬರ್ಗ್ ವೈರಸ್
Published 17 ಫೆಬ್ರುವರಿ 2023, 5:23 IST
Last Updated 17 ಫೆಬ್ರುವರಿ 2023, 5:23 IST
Comments
ಅಕ್ಷರ ಗಾತ್ರ

ಮಲಾಬೋ: ಈಕ್ವಟೋರಿಯಲ್ ಗಿನಿಯಲ್ಲಿ (Equatorial Guinea) ಮಾರಕ ಮಾರ್ಬರ್ಗ್ ವೈರಸ್ (Marburg Virus) ಸಾಂಕ್ರಾಮಿಕ ಕನಿಷ್ಠ 9 ಮಂದಿಯನ್ನು ಬಲಿಪಡೆದುಕೊಂಡಿದೆ. ಎಬೋಲಾ ವೈರಸ್‌ನಷ್ಟೇ ಮಾರಣಾಂತಿಕವಾಗಿರುವ ರಕ್ತಸ್ರಾವ ಜ್ವರಕ್ಕೆ ಕಾರಣವಾಗುವ ಈ ವೈರಸ್, ಮತ್ತೊಂದು ಆಘಾತವಾಗಿ ಎದುರಾಗಿದೆ ಎಂದು ಆರೋಗ್ಯ ಸಚಿವರು ಸೋಮವಾರ ತಿಳಿಸಿದ್ದಾರೆ. ಒಂದು ಪ್ರಾಂತ್ಯವನ್ನು ಸಂಪೂರ್ಣವಾಗಿ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ಫ್ರೂಟ್ ಬ್ಯಾಟ್- ಬಾವಲಿಗಳಿಂದ ಮನುಷ್ಯನಿಗೆ ಹರಡುವ ಅಪಾಯಕಾರಿ ಮಾರ್ಬರ್ಗ್ ವೈರಸ್

ಆಫ್ರಿಕಾದ ಕೇಂದ್ರ ಪಶ್ಚಿಮ ಕರಾವಳಿಯ ಗ್ಯಾಬಾನ್ ಮತ್ತು ಕ್ಯಾಮೆರೂನ್ ಗಡಿಗಳ ಸಮೀಪದ ಪೂರ್ವ ಪ್ರದೇಶದಲ್ಲಿ ದಟ್ಟ ಅರಣ್ಯ ಭಾಗದಲ್ಲಿನ ಜನರಲ್ಲಿ ಹ್ಯಾಮರಾಜಿಕ್ ಫೀವರ್ (ದೇಹದ ಬಹುತೇಕ ಅಂಗ ವ್ಯವಸ್ಥೆಗೆ ಹಾನಿ ಮಾಡಿ. ಒಟ್ಟಾರೆ ಹೃದಯ ವ್ಯವಸ್ಥೆಗೆ ಅಪಾಯ ಉಂಟುಮಾಡುವ ಮತ್ತು ದೇಹದ ಕಾರ್ಯಾಚರಣೆ ಸಾಮರ್ಥ್ಯವನ್ನು ತಗ್ಗಿಸುವ ಸ್ಥಿತಿ) ಶಂಕಿತ ಪ್ರಕರಣಗಳಿಗೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಕಳೆದ ವಾರ ಸರ್ಕಾರ ತಿಳಿಸಿತ್ತು. ಆದರೆ ಮೂವರಲ್ಲಿ ತೀರಾ ಲಘು ಲಕ್ಷಣಗಳು ಮಾತ್ರ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT