ಮೇಕೆದಾಟು ಪಾದಯಾತ್ರೆ: ವರದಿ ನೀಡಲು ಕಾಂಗ್ರೆಸ್ ಕಾನೂನು ಘಟಕದಿಂದ ಸಮಿತಿ ರಚನೆ
ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ಪ್ರಕರಣಗಳ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಮತ್ತು ಹೋರಾಟದ ಬಗ್ಗೆ ಮೂರು ದಿನಗಳ ಒಳಗೆ ವರದಿ ನೀಡಲು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಐವರು ಸದಸ್ಯರ ಉನ್ನತ ಸಮಿತಿಯನ್ನು ರಚಿಸಿದ್ದಾರೆ. Last Updated 16 ಜನವರಿ 2022, 18:58 IST