ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ಸಿಮ್ಯಾಕ್ ಪ್ರಶಸ್ತಿ
ಬೆಂಗಳೂರು: ಕೆಎಸ್‌ಆರ್‌ಟಿಸಿ ಉಪಕ್ರಮಗಳಾದ ‘ಫ್ಲೈಬಸ್’ ಮತ್ತು ‘ಸ್ವಚ್ಛತೆಯೇ ಸೇವೆ’ಗೆ ಸಿಮ್ಯಾಕ್(ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್) ಸಂಸ್ಥೆಯ 2018–19ನೇ ಸಾಲಿನ ಮೊದಲನೇ ಮತು 2019–20ನೇ ಸಾಲಿನ ದ್ವಿತೀಯ ಪ್ರಶಸ್ತಿ ಲಭಿಸಿದೆ.
₹1 ಲಕ್ಷ ಮತ್ತು ₹75 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.Last Updated 11 ಅಕ್ಟೋಬರ್ 2021, 19:46 IST