ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ: ಇಲ್ಲೇ ಮದುವೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ
ನವದೆಹಲಿ: ದೆಹಲಿ ಪೊಲೀಸ್ ವಿಶೇಷ ದಳವು ಪಾಕಿಸ್ತಾನದ ಉಗ್ರನೊಬ್ಬನನ್ನು ಸೋಮವಾರ ಬಂಧಿಸಿದೆ. ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಆತ ದೆಹಲಿಯಲ್ಲಿ ವಾಸಿವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್ ಅಶ್ರಫ್ ಹೆಸರಿನ ಶಂಕಿತ ಉಗ್ರನು ಅಹಮದ್ ನೂರಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ದೆಹಲಿಯ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದ ಎಂದು ದೆಹಲಿ ಪೊಲೀಸ್ ವಿಶೇಷ ದಳದ ಮೂಲಗಳಿಂದ ತಿಳಿದು ಬಂದಿದೆ.Last Updated 12 ಅಕ್ಟೋಬರ್ 2021, 11:11 IST