ಒಳನೋಟ | ವಿದ್ಯುತ್ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು
ಭಾರತದಲ್ಲಿ ಸದ್ಯ ಹಲವು ವಿದ್ಯುತ್ ಚಾಲಿತ ಕಾರುಗಳು ಮಾರಾಟವಾಗುತ್ತಿವೆ. ಪ್ರವೇಶಮಟ್ಟದ ವಿದ್ಯುತ್ ಚಾಲಿತ ಕಾರುಗಳು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 80-90 ಕಿ.ಮೀ.ನಷ್ಟು ದೂರ ಕ್ರಮಿಸುವ (ರೇಂಜ್) ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಚಾಲಿತ ಕಾರುಗಳ ರೇಂಜ್ 300 ಕಿ.ಮೀ.ನಿಂದ 450 ಕಿ.ಮೀ.ವರೆಗೂ ಇವೆ. ಇವುಗಳಲ್ಲಿ ಕೆಲವು ಕಾರುಗಳನ್ನಷ್ಟೇ ದೂರದ ಪ್ರಯಾಣಕ್ಕೆ ಬಳಸಲು ಸಾಧ್ಯವಾಗುತ್ತದೆ, ಅದೂ ಹೆದ್ದಾರಿ ಮಧ್ಯೆ ಚಾರ್ಜಿಂಗ್ ವ್ಯವಸ್ಥೆ ಇದ್ದರೆ ಮಾತ್ರ.Last Updated 10 ಅಕ್ಟೋಬರ್ 2021, 1:10 IST