ಗೌರೀಶ್‌ರಿಗೆ ಗೋಕರ್ಣ, ಎಕ್ಕುಂಡಿಯವರಿಗೆ ಬಂಕಿಕೊಡ್ಲು, ಚಿತ್ತಾಲರಿಗೆ ಹನೇಹಳ್ಳಿ ಹೇಗೆ ವಿಶ್ವವನ್ನು ನೋಡಲು ತೆರೆದಿದ್ದ ‘ನೂರೆಂಟು ಕಿಟಕಿಗಳು’ ಆಗಿದ್ದವೊ ಅವುಗಳನ್ನೇ ವಿಷ್ಣು ನಾಯ್ಕರು ಅಂಕೋಲೆಯ ಅಂಬಾರಕೊಡ್ಲಿನ ತನ್ನ ಪರಿಮಳದ ಅಂಗಳದಲ್ಲಿ ತೆರೆದಿಟ್ಟರು. ರಾಜ್ಯದ ಭಿನ್ನ ಪ್ರದೇಶಗಳಿಂದ ಹಿರಿ-ಕಿರಿಯ ಲೇಖಕರನ್ನು ಆಹ್ವಾನಿಸಿ ಕಥೆ-ಕಾವ್ಯ ಕಮ್ಮಟ, ವಿಚಾರ ಗೋಷ್ಠಿ, ಸಂವಾದ, ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆಯ ಪ್ರಯೋಗ ಶಾಲೆಯನ್ನಾಗಿಸಿದರು. ಅವರ ಮನೆಯಂಗಳದ ಟಂಕಶಾಲೆಯನ್ನು ಪ್ರವೇಶಿಸಿದ ಎಳೆಯರಲ್ಲಿ ಸಾಹಿತ್ಯದ ಅಂತರ್ಜಲವನ್ನು ಕಾಣಿಸಿ, ಬರೆಯಿಸಿ, ಪ್ರಕಟಿಸಿ ಪ್ರೋತ್ಸಾಹಿಸಿದ್ದನ್ನು ಹೊಸತಲೆಮಾರಿನ ಲೇಖಕರು ಮರೆಯಲು ಸಾಧ್ಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.