×
ADVERTISEMENT
ಈ ಕ್ಷಣ :
ADVERTISEMENT

live blog-ಮತದಾನಕ್ಕೆ ಹುರುಪು ತಂದ ಸಿನಿಮಾ ತಾರೆಯರು: ಯಾರ್ಯಾರು ಎಲ್ಲೆಲ್ಲಿ ವೋಟ್ ಮಾಡಿದರು?

Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಕನ್ನಡ ಸಿನಿಮಾ ತಾರೆಯರು ಕೂಡ ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡರು. ಕುಟುಂಬಸ್ಥರೊಂದಿಗೆ ಮತಗಟ್ಟೆಗಳಿಗೆ ಆಗಮಿಸಿದ ತಾರೆಯರು ತಮ್ಮ ಹಕ್ಕು ಚಲಾವಣೆ ಮಾಡಿದ
Published 11 ಮೇ 2023, 5:26 IST
Last Updated 11 ಮೇ 2023, 5:47 IST
ಅಕ್ಷರ ಗಾತ್ರ
ಪ್ರಮುಖ ಘಟನೆಗಳು
05:2511 May 2023

ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ

05:2811 May 2023

ಬೆಳ್ಳಂಬೆಳಗ್ಗೆಯೇ ತಮ್ಮ ಕುಟುಂಬದವರೊಂದಿಗೆ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ ತಾರೆಯರು

05:2511 May 2023

ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ

ವಿಧಾನಸಭೆಗೆ ಬುಧವಾರ ನಡೆದ ಸಾರ್ವತ್ರಿಕ ಚುನಾವಣೆ ಮತದಾನದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಿರಿಯ ತಾರೆಗಳು ಹಾಗೂ ಕಿರುತೆರೆಯ ನಟ ನಟಿಯರು ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ಮತದಾನಕ್ಕೆ ಹುರುಪು ತಂದರು. ಸಿನಿಮಾ ತಾರೆಗಳು ಬೆಳ್ಳಂಬೆಳಗ್ಗೆಯೇ ತಮ್ಮ ಕುಟುಂಬದವರೊಡನೆ ಮತಗಟ್ಟೆಗಳಿಗೆ ತೆರಳಿ ಸಾಮಾನ್ಯ ಮತದಾರರಂತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿ ಯುವಜನತೆಗೆ ಪ್ರೋತ್ಸಾಹ ನೀಡಿದರು.

05:2811 May 2023

ಬೆಳ್ಳಂಬೆಳಗ್ಗೆಯೇ ತಮ್ಮ ಕುಟುಂಬದವರೊಂದಿಗೆ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ ತಾರೆಯರು

ಬೆಳ್ಳಂಬೆಳಗ್ಗೆಯೇ ತಮ್ಮ ಕುಟುಂಬದ

ಬೆಳ್ಳಂಬೆಳಗ್ಗೆಯೇ ತಮ್ಮ ಕುಟುಂಬದ

ಮತಗಟ್ಟೆಗಳಿಗೆ

ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಸಮೇತ ರಾಚೇನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು. ನಟ ಸುದೀಪ್‌ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ಮತ ಚಲಾವಣೆ ಮಾಡಿದರು. ಗೋಲ್ಡನ್‌ ಸ್ಟಾರ್‌ ಗಣೇಶ್‌, ಶಿಲ್ಪಾ ಗಣೇಶ್‌, ದಿಗಂತ್‌, ಐಂದ್ರಿತಾ ರೇ, ರಚಿತಾ ರಾಮ್‌, ಅಮೂಲ್ಯ, ಅವಿನಾಶ್‌, ಮಾಳವಿಕಾ, ವಸಿಷ್ಠ ಸಿಂಹ, ಹರಿಪ್ರಿಯಾ, ರಾಜರಾಜೇಶ್ವರಿನಗರದಲ್ಲಿ, ನೆನಪಿರಲಿ ಪ್ರೇಮ್‌ ದಂಪತಿ ನಾಗರಬಾವಿಯ ರೇಣುಕಾ ಪಬ್ಲಿಕ್‌ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.