H2 ಕ್ಷೇತ್ರದಲ್ಲಿಈ ವರೆಗೆ ಬಿಜೆಪಿ ಪಾಲಾಗುತ್ತಿದ್ದ ಲಿಂಗಾಯತ ಮತಗಳನ್ನು ಕೈ ಅಭ್ಯರ್ಥಿ ಸೆಳೆದುಕೊಂಡಿದ್ದು ಬಿಜೆಪಿ ಸೋಲಿಗೆ ಕಾರಣವಾಯಿತು. ಅತಿಯಾದ ಆತ್ಮವಿಶ್ವಾಸ ಹಾಗೂ ಬಿಜೆಪಿ ಒಳಗಿನ ಆಂತರಿಕ ಬೇಗುದಿಯೂ ಸಹ ಸಿ.ಟಿ ರವಿಗೆ ದೊಡ್ಡ ಪೆಟ್ಟು ನೀಡಿರುವುದು ಫಲಿತಾಂಶದಲ್ಲಿ ಗೋಚರಿಸಿತು. ಹಿಂದಿನ ಬಿಜೆಪಿ ಸರಕಾರದ ಆಡಳಿಯ ವಿರೋಧಿ ಅಲೆಯೂ ಸಹ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ, ಎಚ್.ಡಿ ದೇವೇಗೌಡ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಮುದಾಯಗಳ ಮೇಲೆ ಪರಿಣಾಮ ಬೀರಿದ್ದನ್ನು ಅಲ್ಲ ಗೆಳೆಯುವಂತಿಲ್ಲ. ಜತೆಗೆ ನಗರದ ಪ್ರದೇಶದಲ್ಲಿಅಮೃತ್ ಕುಡಿಯುವ ನೀರು ಯೋಜನೆ ಹಾಗೂ ಯುಜಿಡಿ ಯೋಜನೆಗಳು ವಿಫಲವಾಗಿದ್ದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡಿರುವುದನ್ನು ಉಲ್ಲೇಖಿಸಬಹುದು.