ಭಾರತಕ್ಕೆ ಬೊಫೋರ್ಸ್ ದಾಖಳೆ ಹಸ್ತಾಂತರ

ಬೆರ್ನ್,ಜ.21(ಯುಎನ್‌ಐ) – 1.3 ಶತಕೋಟಿ ಡಾಲರ್ ಬೊಫೋರ್ಸ್ ಬಂದೂಕು ಒಪ್ಪಂದದಲ್ಲಿ ನೀಡಲಾಗಿದೆ ಎನ್ನಲಾದ ರುಷುವತ್ತು ಪಡೆದವರ ಮೇಲೆ ಬೆಳಕು ಚೆಲ್ಲಲಿರುವ 500 ಪುಟಗಳ ರಹಸ್ಯ ಸ್ವಿಸ್ ಬ್ಯಾಂಕ್ ದಾಖಲೆಗಳನ್ನು ಸ್ವಿಟ್ಜರ್‌ಲ್ಯಾಂಡ್ ಸರ್ಕಾರ ಇಂದು ಭಾರತಕ್ಕೆ ಹಸ್ತಾಂತರಿಸಿತು.

ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಬೊಫೋರ್ಸ್ ರುಷುವತ್ತು ಪ್ರಕರಣ ಇದರಿಂದ ಅಂತಿಮ ಘಟ್ಟಕ್ಕೆ ತಲುಪಿದಂತಾಗಿದೆ.

ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್‌ನ ಪಾರ್ಲಿಮೆಂಟ್ ಭವನದಲ್ಲಿ ಇಂದು ಮಧ್ಯಾಹ್ನ ಭಾರತೀಯ ಕಾಲಮಾನ 2.30 ಕ್ಕೆ ನಡೆದ ಸಮಾರಂಭದಲ್ಲಿ ಸ್ವಿಸ್ ಪೊಲೀಸ್ ಇಲಾಖೆಯ ಉಪನಿರ್ದೇಶಕ ರುಡಾಲ್ಫ್ ವಿಸ್ ಅವರು ಸ್ವಿಟ್ಜರ್‌ಲ್ಯಾಂಡ್‌ನ ಭಾರತ ರಾಯಭಾರಿ ಕೆ.ಪಿ ಬಾಲಕೃಷ್ಣನ್‌ಗೆ ಈ ದಾಖಲೆಗಳನ್ನು ಒಪ್ಪಿಸಿದರು.

ಲಾರಿ ಮುಷ್ಕರ ಮತ್ತಷ್ಟು ತೀವ್ರ

ಬೆಂಗಳೂರು, ಜ.21– ನಗರದೊಳಗೆ ಭಾರಿ ಸರಕು ಸಾಗಣೆ ಲಾರಿಗಳ ಪ್ರವೇಶ ಮತ್ತು ಸಂಚಾರದ ಮೇಲೆ ಸಮಯದ ನಿರ್ಬಂಧ ಹೇರಿರುವುದನ್ನು ಪ್ರತಿಭಟಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಇಂದು ಎರಡನೇ ದಿನ ಪ್ರವೇಶಿಸಿದ್ದು, ಮತ್ತಷ್ಟು ತೀವ್ರಗೊಂಡಿದೆ.

ನಗರಕ್ಕೆ ಸರಕು ತರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಂದ ಮಾಲು ವಾಡಿಕೆಯ ಪ್ರಮಾಣದಲ್ಲಿ ಹೊರ ಹೋಗುತ್ತಿಲ್ಲ. ಮರಳು, ಜಲ್ಲಿ, ಕಲ್ಲು ಮತ್ತು ಇತರ ಕಟ್ಟಡ ನಿರ್ಮಾಣ ವಸ್ತುಗಳನ್ನು ಪೂರೈಸುವ ಲಾರಿಗಳ ಸಂಖ್ಯೆಯೂ ಗಮರ್ನಾಹವಾಗಿ ಇಳಿಮುಖಗೊಂಡಿದೆ.

ಭಾರತಕ್ಕೆ ಬೊಫೋರ್ಸ್ ದಾಖಳೆ ಹಸ್ತಾಂತರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.