×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ, 21.1.1997

Published : 20 ಜನವರಿ 2022, 16:19 IST
ಫಾಲೋ ಮಾಡಿ
Comments

ನಿರ್ಬಂಧ ವಿರೋಧಿಸಿ ಲಾರಿ ಮುಷ್ಕರ

ಬೆಂಗಳೂರು, ಜ. 20– ಬೆಂಗಳೂರು ನಗರದ ಒಳಗೆ ಲಾರಿ ಪ್ರವೇಶ ಮತ್ತು ಸಂಚಾರ ನಿರ್ಬಂಧ ಇಂದು ಬೆಳಿಗ್ಗೆ 8 ಗಂಟೆಯಿಂದ ಜಾರಿಗೆ ಬಂತು. ಇದನ್ನು ವಿರೋಧಿಸಿ ಲಾರಿ ಮಾಲೀಕರು ಇಂದಿನಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿದ್ದಾರೆ.

ಬೆಳಿಗ್ಗೆ 8 ಗಂಟೆಯಾಗುತ್ತಿದ್ದಂತೆ, ನಗರವನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಭಾರಿ ಸರಕು ಸಾಗಣೆ ಲಾರಿಗಳನ್ನು ತಡೆದು ನಿಲ್ಲಿಸಲಾಯಿತು. ತುಮಕೂರು ರಸ್ತೆಯಲ್ಲಿ ವಿಡಿಯಾ ಕಾರ್ಖಾನೆಯಿಂದ ನೆಲಮಂಗಲದವರೆಗೆ ಸರಕು ಹೊತ್ತ ನೂರಾರು ಲಾರಿಗಳು ನಗರವನ್ನು ಪ್ರವೇಶಿಸಲು ಕಾದು ನಿಂತಿದ್ದವು. ಉಳಿದ ರಸ್ತೆಗಳಲ್ಲೂ ನೂರಾರು ಲಾರಿಗಳಿದ್ದವು.

ಜೈಲು ವ್ಯವಸ್ಥೆ ಸುಧಾರಣೆಗೆ ಕ್ರಮ: ಪ್ರಧಾನಿ

ಬೆಂಗಳೂರು, ಜ. 20– ಪರಿಸರದ ಒತ್ತಡ ಹಾಗೂ ಕೆಟ್ಟ ಸಾಮಾಜಿಕ ವಾತಾವರಣ ಕಾರಣವಾಗಿ ಅಪರಾಧಿಗಳಾಗುವವರನ್ನು ಸುಧಾರಿಸಿ ಹೊರಕಳುಹಿಸುವ ವ್ಯವಸ್ಥೆಗೆ ಜೈಲುಗಳಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಎಚ್‌.ಡಿ.ದೇವೇಗೌಡ ಇಲ್ಲಿ ಇಂದು ಹೇಳಿದರು.

‘ಯಾರೂ ಉದ್ದೇಶಪೂರ್ವಕವಾಗಿ ಅಪರಾಧಿಗಳಾಗಲು ಬಯಸುವುದಿಲ್ಲ. ಸಮಯ, ಸನ್ನಿವೇಶ ಅವರನ್ನು ಇಂಥ ಒತ್ತಡದಲ್ಲಿ ನಿಲ್ಲಿಸುತ್ತದೆ. ಹಾಗೆಂದೇ ಕೈದಿಗಳನ್ನು ಸುಧಾರಿಸುವುದಕ್ಕಾಗಿ ಬಂದೀಖಾನೆಗಳನ್ನು ಸುಧಾರಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ’ ಎಂದರು.

ಬೆಂಗಳೂರಿನಿಂದ 30 ಕಿ.ಮೀ. ದೂರದ ಪರಪ್ಪನ ಅಗ್ರಹಾರದಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೇಂದ್ರ ಕಾರಾಗೃಹವನ್ನು ಅವರು ಈ ಸಂಜೆ ಉದ್ಘಾಟಿಸಿದರು.

ನಿರ್ಬಂಧ ವಿರೋಧಿಸಿ ಲಾರಿ ಮುಷ್ಕರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT