×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ 16.1.1997

Published : 15 ಜನವರಿ 2022, 19:30 IST
ಫಾಲೋ ಮಾಡಿ
Comments

ಬೆಂಗಳೂರು,ಜ.15– ನಗರದಲ್ಲಿ ಎತ್ತರದಲ್ಲಿ ಹಾಕುವ ಹಳಿಗಳ ಮೇಲೆ ಸಂಚರಿಸುವ ರೈಲು ಭವಿಷ್ಯದ ವ್ಯವಸ್ಥೆಗೆ ಇಂದು ಅಂಕುರಾರ್ಪಣವಾಯಿತು.

2002 ರ ಹೊತ್ತಿಗೆ ಮೊದಲ ಹಂತ ಮುಗಿದು ಹಗುರ ರೈಲು ಸಂಚಾರ ಆರಂಭವಾಗಲಿರುವ ಈ ಯೋಜನೆಗೆ ಪ್ರಸ್ತುತ 4200 ಕೋಟಿ ರೂಪಾಯಿ ವೆಚ್ಚ ಆಗುವ ಅಂದಾಜು ಮಾಡಲಾಗಿದೆ.

ರಾಮನಗರ, ಮೈಸೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ

ನವದೆಹಲಿ, ಜ 15–ರಾಮನಗರ ವಿಧಾನಸಭೆ ಮತ್ತು ಮೈಸೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆಗಳೀಗೆ ಸಿ. ಎಂ ಲಿಂಗಪ್ಪ ಮತ್ತು ಎಚ್‌.ಎ. ವೆಂಕಟೇಶ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಗಳನ್ನಾಗಿ ಆರಿಸಲಾಗಿದೆ.

ಪಂಜಾಬ್‌ ವಿಧಾನಸಭೆ ಚುನಾವಣೆ ಮತ್ತು ಬೇರೆ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಧರ್ಮಸಿಂಗ್‌ ಅವರು ಈ ಇಬ್ಬರು ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ವರಿಷ್ಠ ಮಂಡಲಿಯ ಒಪ್ಪಿಗೆ ಪಡೆದರು.

ಭವಿಷ್ಯದ ನಗರ ಸಾರಿಗೆ ರೈಲಿಗೆ ಅಂಕಿತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT