Summary ಮತದಾನ ಬಹಿಷ್ಕಾರಕ್ಕೆ ಚಿಕ್ಕಮಗಳೂರಿನ ಕಳಸ ಗ್ರಾಮಸ್ಥರ ನಿರ್ಧಾರ ಮತದಾನ ಬಹಿಷ್ಕಾರಕ್ಕೆ ಚಿಕ್ಕಮಗಳೂರಿನ ಕಳಸ ಗ್ರಾಮಸ್ಥರ ನಿರ್ಧಾರ ಕಳಸ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗೋಡು ಪ್ರದೇಶದ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿ ಬೇಸತ್ತು ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 40ಕ್ಕೂ ಹೆಚ್ಚು ಮನೆಗಳು ಇರುವ ಕಲ್ಲುಗೋಡು ಪ್ರದೇಶದ ನಿವಾಸಿಗಳು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ವರ್ಷದ ಹಿಂದೆ ನಿರ್ಮಾಣ ಆದ ತೂಗು ಸೇತುವೆಗೆ ಈವರೆಗೂ ಬಣ್ಣ ಬಳಿದಿಲ್ಲ. ಇದರಿಂದ ಸೇತುವೆ ಶಿಥಿಲ ಆಗಿದ್ದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಮಳೆಗಾಲದಲ್ಲಿಕಲ್ಲುಗೋಡು ಸಂಪರ್ಕಿಸುವ ಸೇತುವೆಯ ತಡೆಗೋಡೆ ಕುಸಿದು ಬಿದ್ದಿದೆ. ಆದರೆ ಈವರೆಗೂ ಅದನ್ನು ಪುನರ್ ನಿರ್ಮಾಣ ಮಾಡುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಿಲ್ಲ. ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 25 ವರ್ಷಗಳಿಂದ ಮನವಿ ಮಾಡಿದ್ದರೂ ಉಪಯೋಗ ಆಗಿಲ್ಲ. ಈ ನಿರ್ಲಕ್ಷ ್ಯ ಖಂಡಿಸಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರ್ಷದ ಹಿಂದೆ ನಿರ್ಮಾಣ ಆದ ತೂಗು ಸೇತುವೆಗೆ ಈವರೆಗೂ ಬಣ್ಣ ಬಳಿದಿಲ್ಲ. ಇದರಿಂದ ಸೇತುವೆ ಶಿಥಿಲ ಆಗಿದ್ದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಮಳೆಗಾಲದಲ್ಲಿಕಲ್ಲುಗೋಡು ಸಂಪರ್ಕಿಸುವ ಸೇತುವೆಯ ತಡೆಗೋಡೆ ಕುಸಿದು ಬಿದ್ದಿದೆ. ಆದರೆ ಈವರೆಗೂ ಅದನ್ನು ಪುನರ್ ನಿರ್ಮಾಣ ಮಾಡುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಿಲ್ಲ. ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 25 ವರ್ಷಗಳಿಂದ ಮನವಿ ಮಾಡಿದ್ದರೂ ಉಪಯೋಗ ಆಗಿಲ್ಲ. ಈ ನಿರ್ಲಕ್ಷ ್ಯ ಖಂಡಿಸಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.