×
ADVERTISEMENT
ಈ ಕ್ಷಣ :
ADVERTISEMENT

Test Visual Story 9th April 2023 - India Weather: ಮುಂದಿನ 3-5 ದಿನಗಳಲ್ಲಿ

Sub: India Weather Update: ದೇಶದಲ್ಲಿ ಬಿಸಿಲ ಝಳ ವ್ಯಾಪಕವಾಗುತ್ತಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚುತ್ತಿದೆ. ಮುಂದಿನ 5 ದಿನಗಳ ಒಳಗೆ ದೇಶದ ಗರಿಷ್ಠ ತಾಪಮಾನ 5 ಡಿಗ್ರಿ ಸೆಲ್ಶೀಯಸ್‌ನಷ್ಟು
Published : 9 ಏಪ್ರಿಲ್ 2023, 12:43 IST
Last Updated : 9 ಏಪ್ರಿಲ್ 2023, 12:43 IST
ಫಾಲೋ ಮಾಡಿ
Comments

ದೇಶದಲ್ಲಿ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣಲಿದ್ದರೂ, ಎಲ್ಲಿಯೂ ಉಷ್ಣ ಮಾರುತ ಬೀಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದ ಯಾವುದೇ ಭಾಗದಲ್ಲೂ ಉಷ್ಣ ಮಾರುತದ ಸೂಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಆದರೆ, ಈಶಾನ್ಯ ಭಾರತ ಹಾಗೂ ಹಿಮಾಲಯ ವಲಯದಲ್ಲಿ ಈ ಸಮಯದಲ್ಲಿ ಸಾಮಾನ್ಯ ಉಷ್ಣಾಂಶ ಪ್ರಮಾಣ ಇರಲಿದ್ದು, ಯಾವುದೇ ರೀತಿಯ ಏರಿಕೆ ದಾಖಲಾಗುವ ಸಾಧ್ಯತೆ ಅತಿ ಕಡಿಮೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೇಶದಲ್ಲಿ ಉಷ್ಣಾಂಶದ ಪ್ರಮಾಣ ಏರಿಕೆ ಆಗಲಿದ್ದರೂ ಕೂಡಾ, ಕೆಲವೆಡೆ ವರುಣ ದೇವ ತಂಪೆರೆಯಲಿದ್ದಾನೆ. ಅದರಲ್ಲೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಾಧಾರಣ ಮಳೆ, ಗುಡುಗು, ಮಿಂಚಿನ ಸಹಿತವಾದ ಮಳೆ ಹಾಗೂ ಜೋರಾಗಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ತೆಲಂಗಾಣ, ತಮಿಳುನಾಡು, ಪುದುಚೆರಿ, ಕೇರಳ ರಾಜ್ಯಗಳ ಹಲವೆಡೆ ಮುಂದಿನ 5 ದಿನಗಳಲ್ಲಿ ಮಳೆಯಾಟ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT