×
ADVERTISEMENT
ಈ ಕ್ಷಣ :
ADVERTISEMENT

ಗುರು ಗ್ರಹದ ಟ್ರೋಜನ್‌ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ಹೊರಟ ನಾಸಾದ ಲೂಸಿ

Published : 16 ಅಕ್ಟೋಬರ್ 2021, 11:28 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಸೌರ ಮಂಡಲದ ಅನ್ಷೇಷಣೆ ಹಾಗೂ ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಶನಿವಾರ ಲೂಸಿ ಎಂಬ ನೌಕೆಯನ್ನು ಕಳಿಸಿದೆ. ಈ ನೌಕೆ ಸೌರಮಂಡಲದಲ್ಲಿ 12 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ.

ಲೂಸಿ ನೌಕೆಯನ್ನು ಹೊತ್ತ ಅಟ್ಲಾಸ್ 5 ರಾಕೆಟ್ ಫ್ಲಾರಿಡಾದ ಕೇಪ್ ಕ್ಯಾನವೆರಲ್‌ ಉಡಾವಣಾ ನೆಲೆಯಿಂದ ಶನಿವಾರ ಮುಂಜಾನೆ ಸ್ಥಳೀಯ ಕಾಲ 5.34ಕ್ಕೆ (0934 ಜಿಎಂಟಿ) ನಭಕ್ಕೆ ಚಿಮ್ಮಿತು.

ಲೂಸಿಯು ಸೌರಶಕ್ತಿಚಾಲಿತ ಬಾಹ್ಯಾಕಾಶ ನೌಕೆಯಾಗಿದೆ. ಈ ಹಿಂದಿನ ಎಲ್ಲ ಅಧ್ಯಯನಗಳಿಗಿಂತಲೂ ಹೆಚ್ಚು ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡುವ ಸಾಮರ್ಥ್ಯ ಹೊಂದಿದೆ. 8 ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲಿದೆ.

ಪ್ರತಿ ಕ್ಷುದ್ರಗ್ರಹಗಳು ಸೌರಮಂಡಲದ ಕಥೆಯ ಒಂದೊಂದು ಭಾಗ ಒದಗಿಸುತ್ತವೆ. ಈಗ ಲೂಸಿ ಹೆಚ್ಚಿನ ನಿಖರ ಮಾಹಿತಿ ನೀಡಲು ಸಿದ್ಧವಾಗಿ ಹೊರಟಿದೆ ಎಂದು ನಾಸಾದ ಸಹ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ತಿಳಿಸಿದ್ದಾರೆ.

ಲೂಸಿಯು 2025ರಲ್ಲಿ ಮೊದಲ ಬಾರಿಗೆ ಮಂಗಳ ಹಾಗೂ ಗುರುವಿನ ನಡುವಿನ ವಲಯದಲ್ಲಿರುವ ಡೊನಾಲ್ಡ್ ಜೋಹಾನ್ಸನ್ ಎಂಬ ಟ್ರೋಜನ್ ಕ್ಷುದ್ರಗ್ರಹವನ್ನು ಭೇಟಿಯಾಗಲಿದೆ. 2027ರಿಂದ 2033ರವರೆಗೆ ಲೂಸಿ ಒಟ್ಟು 7 ಟ್ರೋಜನ್ ಕ್ಷುದ್ರಗ್ರಗಳನ್ನು ಅಧ್ಯಯನ ಮಾಡಲಿದೆ ಎಂದಿದ್ದಾರೆ ಥಾಮಸ್‌.

ಒಂದೊಂದು ಕ್ಷುದ್ರಗ್ರಹಗಳನ್ನು ತಲುಪಿದಾಗ ಲೂಸಿಯು ಸುಮಾರು 400 ಕಿಲೋ ಮೀಟರ್ ಮೇಲ್ಮೈನಲ್ಲಿ ಅವುಗಳ ಬಗ್ಗೆ ಅಧ್ಯಯನ ನಡೆಸಲಿದೆ. ಶನಿ, ಯುರೇನಸ್, ನೆಪ್ಚೂನ್ ರಚನೆಯಿಂದ ಉಳಿದಿರುವ ಕಚ್ಚಾವಸ್ತುಗಳೇ ಈ ಕ್ಷುದ್ರಗ್ರಹಗಳು ಎಂದು ನಂಬಲಾಗಿದೆ. ಗುರು ಗ್ರಹಕ್ಕೆ ಅಂಟಿಕೊಂಡು ಸುಮಾರು 7000 ಟ್ರೋಜನ್ ಕ್ರುದ್ರಗ್ರಹಗಳಿವೆ ಎಂದು ಅಂದಾಜಿಸಲಾಗಿದೆ.

1974 ರಲ್ಲಿ ಇಥಿಯೋಪಿಯಾದಲ್ಲಿ ಆದಿಮಾನವನ ಪಳಿಯುಳಿಕೆ ದೊರಕಿತ್ತು. ಅದು ಮಾನವನ ವಿಕಾಸದ ಮೇಲೆ ಬೆಳಕು ಚೆಲ್ಲಲು ಪ್ರಮುಖ ಮೂಲವಾಗಿತ್ತು. ಅದಕ್ಕೆ ಲೂಸಿ ಎಂದು ಹೆಸರಿಡಲಾಗಿತ್ತು. ಇದರ ಸ್ಮರಣಾರ್ಥವೇ ಇದೀಗ ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಹೊರಟ ನೌಕೆಗೆ ನಾಸಾ ಲೂಸಿ ಎಂಬ ಹೆಸರಿಟ್ಟಿದೆ. 

ಸೌರ ಮಂಡಲದ ಅನ್ಷೇಷಣೆ ಹಾಗೂ ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಶನಿವಾರ ಲೂಸಿ ಎಂಬ ನೌಕೆಯನ್ನು ಕಳಿಸಿದೆ. ಈ ನೌಕೆ ಸೌರಮಂಡಲದಲ್ಲಿ 12 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT