×
ADVERTISEMENT
ಈ ಕ್ಷಣ :
ADVERTISEMENT

ಇಂಡೊನೇಷ್ಯಾ: ನದಿ ಸ್ವಚ್ಛತೆಗೆ ತೆರಳಿದ್ದ 11 ಮಕ್ಕಳು ನೀರುಪಾಲು, 10 ಮಂದಿ ರಕ್ಷಣೆ

ಫಾಲೋ ಮಾಡಿ
Comments

ಜಕಾರ್ತ, ಇಂಡೊನೇಷ್ಯಾ: ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದವರ ಪೈಕಿ 11 ವಿದ್ಯಾರ್ಥಿಗಳು ನೀರು ಪಾಲಾಗಿದ್ದು, 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಸ್ಲಾಮಿಕ್‌ ಜೂನಿಯರ್‌ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಶುಕ್ರವಾರ ಸಿಲಿಯೂರ್‌ ನದಿ ತೀರದ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ 21 ಮಕ್ಕಳು ನದಿಯಲ್ಲಿ ಜಾರಿ ಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. 

‘ನದಿಯಲ್ಲಿ ಯಾವುದೇ ಪ್ರವಾಹ ಇರಲಿಲ್ಲ. ಹವಾಮಾನವೂ ಸಾಮಾನ್ಯವಾಗಿತ್ತು. ನೀರಿನಲ್ಲಿ ಮುಳುಗಿದ ಮಕ್ಕಳು ಪರಸ್ಪರ ಕೈಗಳನ್ನು ಹಿಡಿದಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಉಳಿದವರೂ ಅವನ ಜೊತೆ ನೀರುಪಾಲಾಗಿದ್ದಾರೆ’ ಎಂದು ಬಾಂಡುಂಗ್‌ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ದೇಡೆನ್‌ ರಿದ್ವಾನ್‌ಸೇ ಹೇಳಿದರು. 

ಹತ್ತಿರದಲ್ಲಿಯ ಜನರು ಮತ್ತು ರಕ್ಷಣಾ ಸಿಬ್ಬಂದಿ 10 ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.  

ಇಂಡೋನೇಷ್ಯಾ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದ 11 ವಿದ್ಯಾರ್ಥಿಗಳು ನೀರುಪಾಲಾಗಿದ್ದು 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT