×
ADVERTISEMENT
ಈ ಕ್ಷಣ :
ADVERTISEMENT

ಜನಸಂಖ್ಯೆಯಿಂದಾಗಿ ಕಲಿಕೆಯ ವ್ಯಾಪಕ ಆಯ್ಕೆಗೆ ಅವಕಾಶವಿಲ್ಲ: ಹೈಕೋರ್ಟ್‌

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಬಾಲಕನ ಅರ್ಜಿ * ಕೊಡಗಿನ ಸೈನಿಕ ಶಾಲೆ ಬದಲು ಬೇರೆ ವಸತಿ ಶಾಲೆಗೆ ದಾಖಲಿಸಲು ನಿರ್ದೇಶನ
Published : 15 ಜನವರಿ 2022, 20:07 IST
ಫಾಲೋ ಮಾಡಿ
Comments

ಬೆಂಗಳೂರು: ’ಕೋವಿಡ್‌–19ರಲ್ಲಿ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಗು ತಾನು ಇಂತಹದ್ದೇ ಶಾಲೆಯಲ್ಲಿ ಕಲಿಯಬೇಕು. ಅದಕ್ಕಾಗಿ ಅವಕಾಶ ಕಲ್ಪಿಸಿಕೊಡಿ ಎಂದು ನಿರ್ದಿಷ್ಟ ಶಾಲೆಯಲ್ಲಿ ಪ್ರವೇಶ ಬಯಸಿದರೆ; ಅಂತಹ ಮನವಿಗೆ ಕೋರ್ಟ್‌ನ ಕೃಪಾದೃಷ್ಟಿ ದಕ್ಕುವುದು ಕಷ್ಟ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ‘ನನಗೆ ಕುಶಾಲನಗರ ತಾಲ್ಲೂಕಿನ ಸೈನಿಕ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ದೊರಕಿಸಿಕೊಡಲು ನಿರ್ದೇಶಿಸಬೇಕು’ ಎಂದು ಕೋರಿ ಮಲ್ಲೇಶ್ವರದ ಮೊಹಮದ್ ಬ್ಲಾಕ್‌ನ 14 ವರ್ಷದ ಮೊಹಮದ್‌ ತಾಖಿ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT