ಬೆಂಗಳೂರು: ಮಿತ್ರ ದೇಶಗಳಿಗೆ ರಕ್ಷಣಾ ಉತ್ಪನ್ನಗಳ ರಫ್ತು ಹೆಚ್ಚಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಪೂರಕವಾಗಿ ಎಚ್‌ಎಎಲ್ ತನ್ನ ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು (ಎಎಲ್‌ಎಚ್–3) ರಫ್ತು ಮಾಡುವ ಒಪ್ಪಂದಕ್ಕೆ ಮಾರಿಷಸ್ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಮಾಡಿದೆ.
ದ್ವೀಪ ರಾಷ್ಟ್ರ ಮಾರಿಷಸ್ ತನ್ನ ಪೊಲೀಸ್ ಪಡೆಯಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಿದೆ. ಈಗಾಗಲೇ ಎಚ್‌ಎಎಲ್ ನಿರ್ಮಿತ ಎಎಲ್‌ಎಚ್ ಮತ್ತು ಡೋನಿಯೆರ್ 228 ವಿಮಾನಗಳನ್ನು ಬಳಸುತ್ತಿದೆ. ಹೊಸ ಒಪ್ಪಂದ ಎರಡೂ ರಾಷ್ಟ್ರಗಳ ಮಧ್ಯೆ ಮೂರು ದಶಕಗಳಿಂದ ಇರುವ ಬಾಂಧವ್ಯ ಇನ್ನಷ್ಟು ವೃದ್ಧಿಸಲಿದೆ ಎಂದು ಎಚ್‌ಎಎಲ್ ಪ್ರಕಟಣೆ ತಿಳಿಸಿದೆ.