ಮೈಸೂರು: ‘ಕೊರೊನಾ ಹೆಸರಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಾದರೆ ಕೋವಿಡ್ ಲಸಿಕೆ ಏಕೆ ನೀಡಬೇಕಿತ್ತು’ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮೊದಲ ಡೋಸ್‌ನಲ್ಲಿ ಶೇ 99 ಹಾಗೂ ಎರಡನೇ ಡೋಸ್‌ನಲ್ಲಿ ಶೇ 80 ಸಾಧನೆ ಮಾಡಲಾಗಿದೆ. ಈಗ ಬೂಸ್ಟರ್ ಡೋಸ್ ಬಂದಿದ್ದು, ಕೊರೊನಾ ಸೋಂಕು ಪ್ರಸರಣದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗಿದೆ. ಆಸ್ಪತ್ರೆಗಳಲ್ಲಿ ಮತ್ತಷ್ಟು ಬೆಡ್ ವ್ಯವಸ್ಥೆ ಮಾಡಿ, ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಹೀಗಿದ್ದೂ, ಜನರಿಗೆ ಅನಗತ್ಯ ತೊಂದರೆ ಕೊಡಲಾಗುತ್ತಿದೆ’ ಎಂದರು.