×
ADVERTISEMENT
ಈ ಕ್ಷಣ :
ADVERTISEMENT

ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿ ತಪ್ಪು ಮಾಡಿದ್ದೇನೆ: ಕಣ್ಣೀರಿಟ್ಟ ಸಲೀಂ

Published : 14 ಅಕ್ಟೋಬರ್ 2021, 13:32 IST
ಫಾಲೋ ಮಾಡಿ
Comments

ಬೆಂಗಳೂರು: 'ನನ್ನಿಂದ ದೊಡ್ಡ ತಪ್ಪಾಗಿದೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ  ಮಾತನಾಡಬಾರದಾಗಿತ್ತು. ಮಾತನಾಡಿ ತಪ್ಪು ಮಾಡಿದ್ದೇನೆ' ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಕಣ್ಣೀರು ಹಾಕಿದ್ದಾರೆ. 

ನೀರಾವರಿ ಇಲಾಖೆಯಲ್ಲಿ ಪರ್ಸೆಂಟೇಜ್ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಬಗ್ಗೆ ಪಕ್ಷದ ಇನ್ನೊಬ್ಬ ಮುಖಂಡ ವಿ.ಎಸ್. ಉಗ್ರಪ್ಪ ಜೊತೆ ಖಾಸಗಿಯಾಗಿ ಸಲೀಂ ಮಾತನಾಡಿರುವುದು ಬುಧವಾರ ವೈರಲ್ ಆಗಿತ್ತು. ಆ ಬಳಿಕ ಸಲೀಂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. 

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಸಲೀಂ, 'ಡಿ.ಕೆ. ಶಿವಕುಮಾರ್ ಅವರು ಏನೇ ಶಿಕ್ಷೆ ಕೊಡಲಿ. ಅವರು ನನ್ನನ್ನು ಬೇಕಾದರೆ ಸಾಯಿಸಲಿ.‌ ಅದಕ್ಕೂ ಸಿದ್ಧನಿದ್ದೇನೆ' ಎಂದು ಭಾವುಕರಾಗಿ ಹೇಳಿದರು. 

'ಡಿ.ಕೆ.ಶಿವಕುಮಾರ್ ಅವರನ್ನು ನಾನು ಭೇಟಿ ಮಾಡಿಲ್ಲ. ಯಾವ ಮುಖ ಇಟ್ಟುಕೊಂಡು ಅವರನ್ನು ಭೇಟಿ ಮಾಡಲಿ. ಅವರು ನನ್ನ ಜೊತೆ ಮಾತನಾಡಿಲ್ಲ. ನನ್ನಿಂದ ಪಕ್ಷಕ್ಕೆ, ಡಿ.ಕೆ.ಶಿವಕುಮಾರ್ ಅವರ ಇಮೇಜ್‌ಗೆ ಧಕ್ಕೆಯಾಗಿದೆ.‌ ಇಷ್ಟು ವರ್ಷಗಳ ನನ್ನ ಸಾಧನೆ ಮಣ್ಣು ಪಾಲಾಯಿತು. ಕಾಂಗ್ರೆಸ್ ಪಕ್ಷ ನನ್ನನ್ನು ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದೆ. ಆದರೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ' ಎಂದರು.

ಇವುಗಳನ್ನೂ ಓದಿ...

'ನನ್ನಿಂದ ದೊಡ್ಡ ತಪ್ಪಾಗಿದೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ  ಮಾತನಾಡಬಾರದಾಗಿತ್ತು. ಮಾತನಾಡಿ ತಪ್ಪು ಮಾಡಿದ್ದೇನೆ' ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಕಣ್ಣೀರು ಹಾಕಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT