ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರು ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರುತ್ತಿದ್ದರೆ, ಇನ್ನೊಂದೆಡೆ ವಿರೊಧ ಪಕ್ಷಗಳ ಪ್ರಮುಖರನ್ನೇ ತನ್ನತ್ತ ಬಿಜೆಪಿ ಸೆಳೆಯುತ್ತಿದೆ. ಕಾಂಗ್ರೆಸ್ನ ಅತ್ಯಂತ ಮಹತ್ವಾಕಾಂಕ್ಷಿ ‘ಲಡಕೀ ಹೂಂ, ಲಡ್ ಸಕತೀ ಹೂಂ’ (ಹುಡುಗಿ, ಹೋರಾಡಬಲ್ಲೆ) ಅಭಿಯಾನದ ಪೋಸ್ಟರ್ ಗರ್ಲ್ ಆಗಿದ್ದ ಪ್ರಿಯಾಂಕಾ ಮೌರ್ಯಾ ಅವರು ಗುರುವಾರ ಬಿಜೆಪಿ ಸೇರಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧಿ ಮತ್ತು ಪಕ್ಷದ ಶಾಸಕ ಪ್ರಮೋದ್ ಗುಪ್ತಾ ಅವರು ಸಹ ಬಿಜೆಪಿ ಸೇರಿದ್ದಾರೆ.