ಲಖನೌ (ಪಿಟಿಐ): ಉತ್ತರ ಪ್ರದೇಶ ಮಾಜಿ ಸಚಿವ, ಇತರ ಹಿಂದುಳಿದ ವರ್ಗಗಳ ಪ್ರಮುಖ ನಾಯಕ ದಾರಾ ಸಿಂಗ್ ಚೌಹಾಣ್ ಅವರು ಸಮಾಜವಾದಿ ಪಕ್ಷಕ್ಕೆ (ಎಸ್ಪಿ) ಭಾನುವಾರ ಸೇರಿದರು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸಂಪುಟಕ್ಕೆ ಅವರು ಬುಧವಾರವಷ್ಟೇ ರಾಜೀನಾಮೆ ನೀಡಿದ್ದರು.
ದಾರಾ ಸಿಂಗ್ ಅವರ ಜೊತೆಗೆ, ಹಿಂದುಳಿದ ವರ್ಗಗಳ ನಾಯಕ, ವಿಶ್ವನಾಥ್ಗಂಜ್ ವಿಧಾನಸಭೆ ಕ್ಷೇತ್ರದ ಅಪ್ನಾ ದಳ (ಸೋನೆಲಾಲ್) ಪಕ್ಷದ ಶಾಸಕ ಆರ್.ಕೆ. ವರ್ಮ ಕೂಡಾ ಎಸ್ಪಿಗೆ ಸೇರ್ಪಡೆ ಆದರು. ಅಪ್ನಾ ದಳ (ಸೋನೆಲಾಲ್) ಬಿಜೆಪಿಯ ಮಿತ್ರ ಪಕ್ಷವಾಗಿದೆ.