×
ADVERTISEMENT
ಈ ಕ್ಷಣ :
ADVERTISEMENT

Salman Khan: ಸುಶೀಲಾರನ್ನು ಮದುವೆಯಾಗಲು ಕಷ್ಟಪಟ್ಟಿದ್ದ ನಟ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ (Salman Khan), ಅರ್ಬಾಜ್ ಖಾನ್, ಸೊಹೇಲ್ ಖಾನ್, ಅವಿರಾ ಅವರ ತಾಯಿ ಹಿಂದು ಎಂದು ಅನೇಕರಿಗೆ ಗೊತ್ತಿಲ್ಲ. ಹೌದು
Published 3 ಮಾರ್ಚ್ 2023, 20:07 IST
Last Updated 25 ಏಪ್ರಿಲ್ 2023, 18:08 IST
Comments
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಸುಶೀಲಾರನ್ನು ಮದುವೆಯಾಗಿರುವ ಸಲೀಂ
March20202hrs20min
3.5/5
ನಿರ್ದೇಶಕ:PKumaran director
ಪಾತ್ರವರ್ಗ:test movie cast
ಸಂಗೀತ ನಿರ್ದೇಶಕ:music director md

ಲ್ಮಾನ್ ಖಾನ್ ಅವರ ತಾಯಿಯ ಮೊದಲ ಹೆಸರು ಸುಶೀಲಾ. ಸಲೀಂ, ಸುಶೀಲಾ ಮನೆಯವರು ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಎದುರು ಬದುರು ಮನೆಯಲ್ಲಿ ವಾಸ ಮಾಡುತ್ತಿದ್ದರು. ಹಾಗೆ ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು, ಅಷ್ಟೇ ಅಲ್ಲದೆ ಆಗಾಗ ಕದ್ದು ಮುಚ್ಚಿ ಭೇಟಿ ಆಗುತ್ತಿದ್ದರಂತೆ. ಇನ್ನೇನು ಇವರಿಬ್ಬರು ಮದುವೆಯಾಗಬೇಕು ಎಂದು ಫಿಕ್ಸ್ ಆದಾಗ ಸಲೀಂ ಖಾನ್ ಅವರು ಸುಶೀಲಾ ಅವರ ಪಾಲಕರನ್ನು ಭೇಟಿಯಾದರು. ಆ ವೇಳೆ ಅವರಿಗೆ ಎಂದೂ ಆಗದಷ್ಟು ಹೆದರಿಕೆ ಆಗಿತ್ತು. ಸಲೀಂ ಖಾನ್ ಅವರು ಮದುವೆ ಬಗ್ಗೆ ಮಾತನಾಡುತ್ತ, "ನಾನು ಸುಶೀಲಾ ಮನೆಗೆ ಹೋದಾಗ ಎಲ್ಲರೂ ನನ್ನ ಜೂದಲ್ಲಿರುವ ಹೊಸ ಪ್ರಾಣಿ ರೀತಿ ನೋಡುತ್ತಿದ್ದರು. ಆಮೇಲೆ ನನ್ನ ಮಾವ ಬಂದು ನಿನ್ನ ಬಗ್ಗೆ ವಿಚಾರಣೆ ಮಾಡಿದ್ದೇವೆ, ಒಳ್ಳೆಯ ಕುಟುಂಬದವನು, ಚೆನ್ನಾಗಿ ಓದುಕೊಂಡಿದ್ದೀಯಾ. ಆದರೆ ಧರ್ಮ ಬೇರೆ, ಮಗಳನ್ನು ಕೊಡಲ್ಲ ಎಂದ್ರು" ಎಂದಿದ್ದಾರೆ.

2ನೇ ಮದುವೆ ಬಗ್ಗೆ ಸಲೀಂ ಏನಂತಾರೆ?

ಈ ಮದುವೆಯಾಗಿ 17 ವರ್ಷಗಳ ನಂತರದಲ್ಲಿ ಸಲೀಂ ಅವರು ನಟಿ ಹೆಲೆನ್‌ರನ್ನು ಮದುವೆಯಾದರು. ಈ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದ ಅವರು, "ನಾನು ನನ್ನ ಮೊದಲ ಪತ್ನಿಗೆ ಹೆಲೆನ್ ಬಗ್ಗೆ ಹೇಳಿ ಇದು ನನ್ನ ರಿಲೇಶನ್‌ಶಿಪ್ ಅಂತ ಹೇಳಿದೆ. ಆಗ ಅವಳು ನನಗೆ ಒಳ್ಳೆಯದು, ನಿನಗೆ ಇದಕ್ಕೊಂದು ಪ್ರಶಸ್ತಿ ಕೊಡಬೇಕು ಅಂತೇನೂ ಹೇಳಲಿಲ್ಲ. ಆದರೆ ಇದೊಂದು ಭಾವನಾತ್ಮಕವಾಗಿ ನಡೆದುಹೋಯ್ತು, ಎಲ್ಲರ ಜೊತೆಯೂ ಆಗಬಹುದು" ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT