ನವದೆಹಲಿ (ಪಿಟಿಐ): ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನವನ್ನು ಫೆ. 14ರ ಬದಲು 20ಕ್ಕೆ ನಡೆಸಲು ಚುನಾವಣಾ ಆಯೋಗವು ಸೋಮವಾರ ನಿರ್ಧರಿಸಿದೆ.
ವಿಧಾನಸಭೆಗೆ ಮತದಾನ ಮತ್ತು ಉಪ ಚುನಾವಣೆ ಮತದಾನದ ದಿನಾಂಕವನ್ನು ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಬದಲಿಸಿರುವುದು ಇದೇ ಮೊದಲೇನೂ ಅಲ್ಲ ಎಂದು ಆಯೋಗದ ಮೂಲಗಳು ಹೇಳಿವೆ.
ಮಿಜೋರಾಂ ವಿಧಾನಸಭೆಗೆ 2013ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಮತದಾನದ ದಿನಾಂಕಗಳಲ್ಲಿ ಕೆಲವು ಬದಲಾವಣೆಗಳನ್ನು ಆಯೋಗವು 2013ರ ಅಕ್ಟೋಬರ್‌ನಲ್ಲಿ ಮಾಡಿತ್ತು. ಮಿಜೋರಾಂನಲ್ಲಿ 2014ರಲ್ಲಿ ನಡೆಯಬೇಕಿದ್ದ ವಿಧಾನಸಭೆ ಚುನಾವಣೆಯ ದಿನಾಂಕವನ್ನೂ ಬದಲಾಯಿಸಲಾಗಿತ್ತು.