×
ADVERTISEMENT
ಈ ಕ್ಷಣ :
ADVERTISEMENT

ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಲು ಹೋದ ಪೊಲೀಸರ ಮೇಲೆ ಗ್ರಾಮಸ್ಥರ ದಾಳಿ

Published : 18 ಅಕ್ಟೋಬರ್ 2021, 14:22 IST
ಫಾಲೋ ಮಾಡಿ
Comments

ಹರ್ದೋಯ್‌:  ಸುಮಾರು ಒಂದು ತಿಂಗಳ ಹಿಂದೆ ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಲು ಗ್ರಾಮವೊಂದಕ್ಕೆ ಹೋದ ಪೊಲೀಸ್ ತಂಡದ ಮೇಲೆ ಜನರ ಗುಂಪೊಂದು ಸೋಮವಾರ ದಾಳಿ ನಡೆಸಿದೆ.

ಉತ್ತರ ಪ್ರದೇಶದ ಹರ್ದೋಯ್‌ ಜಿಲ್ಲೆಯಾ ಕುರಿಯಾ ಕಾಲಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. 

ಪೊಲೀಸರು ತೆರಳಿದ್ದ ವಾಹವನ್ನೂ ಗ್ರಾಮಸ್ಥರು ಹಾನಿಗೊಳಿಸಿದ್ದಾರೆ. ಅದರ ಚಾಲಕ ಮುಖೇಶ್ ಸಿಂಗ್ ಅವರನ್ನು ಥಳಿಸಿದ್ದಾರೆ. 

ಪೊಲೀಸರ ವಶದಲ್ಲಿದ್ದ ಮಹಿಳೆಯನ್ನು ಜನರ ಗುಂಪು ಬಲವಂತವಾಗಿ ಕರೆದೊಯ್ದಿದೆ. ಘಟನೆ ಸಂಬಂಧ 12 ಜನರ ವಿರುದ್ಧ ಕೊಲೆ ಯತ್ನ, ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಸ್ಟೇಷನ್‌ ಮುಖ್ಯಸ್ಥ ರಾಜನಾಥ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಲು ಮತ್ತು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ. 

ಸುಮಾರು ಒಂದು ತಿಂಗಳ ಹಿಂದೆ 25 ವರ್ಷದ ಮಹಿಳೆಯನ್ನು ಅಪಹರಿಸಿದ ಕುರಿತು  ಇಲ್ಲಿನ ಹರಪಲ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮಹಿಳೆ ಕುರಿಯ ಕಾಲಾ ಗ್ರಾಮದಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಗ್ರಾಮಕ್ಕೆ ತಲುಪಿದ ಪೊಲೀಸರು ಮೋಹಿತ್‌ ಎಂಬುವವರ ಮನೆಯಲ್ಲಿದ್ದ ಮಹಿಳೆಯನ್ನು ತಮ್ಮ ವಶಕ್ಕೆ ಪಡೆದಿದ್ದರು ಎಂದು ಇನ್‌ಸ್ಪೆಕ್ಟರ್‌ ಕಿರಣ್‌ ಪಾಲ್‌ ಸಿಂಗ್‌ ತಿಳಿಸಿದ್ದಾರೆ. 

ಪೊಲೀಸರು ಮಹಿಳೆಯೊಂದಿಗೆ ಹೊರಡಲು ಮುಂದಾದಾಗ, ಗ್ರಾಮಸ್ಥರು ಅವರ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಪೊಲೀಸ್‌ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. 

ಸುಮಾರು ಒಂದು ತಿಂಗಳ ಹಿಂದೆ ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಲು ಗ್ರಾಮವೊಂದಕ್ಕೆ ಹೋದ ಪೊಲೀಸ್ ತಂಡದ ಮೇಲೆ ಜನರ ಗುಂಪೊಂದು ಸೋಮವಾರ ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT